ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ-ಪುತ್ತೂರಿನ ಬೆಳ್ಳಾರೆಯ ಜ್ಞಾ ನಗಂಗಾ ಸೆಂಟ್ರಲ್ ಶಾಲೆಯಲ್ಲಿ ಅಕ್ಟೋಬರ್ ಒಂಬತ್ತರಂದು ವಿಶ್ವ ಅಂಚೆ  ದಿನಾಚರಣೆಯ ಉದ್ಘಾ ಟನೆ ನಡೆಯಿತು. ವಿಶ್ವ ಅಂಚೆ ದಿನಾಚರಣೆಯ ಉದ್ಘಾ ಟನೆಗೈ ದು ಮಾತನಾಡಿದ ಪುತ್ತೂರು ಉಪ ಅಂಚೆ ಅಧೀ ಕ್ಷಕರು  ಉಷಾ ಕೆ ಆರ್ ಅವರು ಅಂಚೆಯು ತನ್ನ ಪ್ರಾಧಾನ್ಯತೆಯನ್ನು ಜನಸಾಮಾನ್ಯರಲ್ಲಿ ಇಂದಿಗೂ  ಉಳಿಸಿಕೊಂಡಿದೆ. ಅಂಚೆ ಜೀ ವವಿಮೆ, ಬ್ಯಾಂಕಿಂಗ್ ಸೌಲಭ್ಯ ,ಸ್ಪೀಡ್ ಪೋ ಸ್ಟ್, ಪಾಸ್ ಪೋ ರ್ಟ್ , ಆಧಾರ್ ನೋಂದಣಿ ಅಪ್ಡೇಟ್, ಇತ್ಯಾ ದಿಗಳ ಮೂಲಕ ಅಂಚೆ ಸೇವೆ ಮತ್ತೆ ಮುನ್ನೆ ಲೆಗೆ ಬರುತ್ತಿದೆ ಎಂದು ನೆನಪಿಸಿದರು. ಜ್ಞಾ ನಗಂಗಾ ಸೆಂಟ್ರಲ್ ಶಾಲೆಯ  ಪ್ರಾಂಶುಪಾಲೆ ದೇಚಮ್ಮ ಅಧ್ಯಕ್ಷತೆಯನ್ನು ವಹಿಸಿದ್ದರು.    

ತರುವಾಯ ನಡೆದ ಅಂಚೆ ಚೀಟಿ-ನಾಣ್ಯ ಪ್ರದರ್ಶನದಲ್ಲಿ ಮೂಡುಬಿದಿರೆಯ ರಾಯೀ ರಾಜಕುಮಾರ್ ರವರು ಪ್ರಕೃತಿ, ಹೂವುಗಳು, ಗುಲಾಬಿ, ಸ್ವಾತಂತ್ರ್ಯೋತ್ತರ  ಭಾರತದ ಅಂಚೆ ಚೀಟಿ, ಮಿನಿಚರ್ ಶೀಟ್ಗಳು, ಮೊದಲ ದಿನದ ಕವರ್ ಗಳು, ವಿಶೇಷ  ಲಕೋಟೆ, ಹಳೆಯ ನಾಣ್ಯ , ನೋಟುಗಳನ್ನು ಪ್ರದರ್ಶಿಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಪ್ರದರ್ಶನವನ್ನು ವೀಕ್ಷಿಸಿ, ಮಾಹಿತಿಯನ್ನು ಪಡೆದುಕೊಂಡರು.

ಮಧ್ಯಾಹ್ನ ನಡೆದ ಅಂಚೆ ಚೀಟಿ ಕಾರ್ಯಗಾರವನ್ನು ನಡೆಸಿಕೊಟ್ಟ ರಾಜ್ಯ ಸಂಪನ್ಮೂ ಲ ವ್ಯಕ್ತಿರಾಯಿ ರಾಜಕುಮಾರರು ಮೇಲಿನ ಎಲ್ಲವಿಭಾಗಗಳ ಅಂಚೆ-ಚೀಟಿಯ ಸಂಗ್ರಹಣೆ, ರಕ್ಷಣೆಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಹವ್ಯಾ ಸಗಳ ರಾಜ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಣೆ, ಬಹಳ ಬೆಲೆಬಾಳುವ ಹವ್ಯಾಸವಾಗಿದೆ ಎಂದು ಅದರ ವಿವಿಧ ವೈವಿಧ್ಯತೆಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು.

ಸಂಜೆ ನಡೆದ ಸಮಾರೋ ಪಸಮಾರಂಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಅಂಚೆ ಚೀಟಿ ಸಂಬಂಧಿಸಿದ ಕ್ವಿ ಜ್ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸೆಂಟ್ರಲ್ ಶಾಲೆಯ ಉಪ ಪ್ರಾಂಶುಪಾಲೆ ಗೀತಾಮಣಿಯವರು ಬಹುಮಾನಗಳನ್ನು ವಿತರಿಸಿದರು. ವೇದಿಕೆಯಲ್ಲಿ ಪುತ್ತೂರು ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಸಹಾಯಕಿ  ಸುಮಾ ಎಚ್ ಎಸ್, ಪುತ್ತೂರು ಅಂಚೆ ವಿಭಾಗದ ಮುಖ್ಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ಕೆ ಎಸ್, ಹಾಗೂ ಸುಳ್ಯದ ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ ಅವರು ಹಾಜರಿದ್ದರು.