ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಸುವರ್ಣ ಮಹೋತ್ಸವ ಪ್ರಯುಕ್ತ ಕರ್ನಾಟಕದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ "ಕರ್ನಾಟಕದ ನಾನು ಕಂಡ ಕೊಂಕಣಿಯ ಕವಿಗಳು ಮತ್ತು ಅವರ ಕೃತಿಗಳು" ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ "ಕರ್ನಾಟಕದ ನಾನು ಕಂಡ ಕೊಂಕಣಿಯ ಸಾಹಿತಿಗಳು ಮತ್ತು ಅವರ ಕೃತಿಗಳು" ಎಂಬ ವಿಷಯಗಳ ಮೇಲೆ ಕನ್ನಡ ಹಾಗೂ ದೇವ್ ನಗರಿ ಎರಡೂ ಲಿಪಿಯಲ್ಲಿ ಬರೆಯಬಹುದಾದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧವು ಸಂಸ್ಥಾಪಕ ಕಾರ್ಯದರ್ಶಿ ಆಸ್ಟಿನ್ ಡಿಸೋಜ ಪ್ರಭು ಪ್ರಾಯೋಜಿತ ಈ ಪ್ರಬಂಧ ಸ್ಪರ್ಧೆ ಆಗಿದ್ದು 1000 ರಿಂದ1500 ಶಬ್ದಗಳು ಇರಬೇಕು. ಬಂದ ಎಲ್ಲಾ ಪ್ರಬಂಧಗಳಿಗೆ ಪ್ರೋತ್ಸಾಹ ಬಹುಮಾನ ಹಾಗೂ ಪ್ರಮಾಣಪತ್ರ ಇದೆ. ಬಹುಮಾನವಾಗಿ ಪ್ರಥಮ ಒಂದು ಸಾವಿರ ರೂಪಾಯಿ,ದ್ವಿತೀಯ ಏಳ್ನೂರ ಐವತ್ತು ರೂಪಾಯಿ, ತೃತೀಯ ಐನೂರು ರೂಪಾಯಿ ಆಗಿದೆ ಎಂದು ಸಂಚಾಲಕರು ತಿಳಿಸಿದ್ದಾರೆ.
ಪ್ರಬಂಧಗಳು ತಲುಪಲು ಕೊನೆಯ ತಾರೀಖು 5ಡಿಸೆಂಬರ್ ಆಗಿದೆ.