ಪುತ್ತೂರು , ಏಪ್ರಿಲ್ 07: ಸಾಹಿತ್ಯದ ರಚನೆಯ ಜೊತೆಯಲ್ಲಿ ಮಕ್ಕಳಿಗೆ ಸಾಹಿತ್ಯದ ಪ್ರೋತ್ಸಾಹ ನೀಡಿ ಓದುಗರ ಸೃಷ್ಟಿ ಕೂಡಾ ಮಾಡುವ ಚಿಗುರೆಲೆ ಸಾಹಿತ್ಯ ಬಳಗವು ಹಿರಿಯ ಕಿರಿಯರ ಸಣ್ಣ ಮೊತ್ತದ ಕಿರು ಸಾಹಿತ್ಯ ಕೃತಿಗಳು ಬಿಡುಗಡೆ ಮಾಡುವುದು ಶ್ಲಾಘನೀಯ ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ಚಿಗುರೆಲೆ ಸಾಹಿತ್ಯ ಬಳಗದ ವಾರ್ಷಿಕೋತ್ಸವದ ಪ್ರಯುಕ್ತ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು, ವಿವೇಕಾನಂದ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಶಾಲಾ ಮಕ್ಕಳ ಎರಡು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟನೆ ದೀಪ ಬೆಳಗಿಸಿ ಮಾಡಿ ಮಾತನಾಡುತ್ತಿದ್ದರು.
ಸಾಧನಾ ಸಾಂಸ್ಕೃತಿಕ ಪ್ರತಿಷ್ಠಾನದ ಅದ್ಯಕ್ಷ ಕಾವಿ ಕೃಷ್ಣದಾಸ್ ಚಿಗುರೆಲೆ ಸಾಹಿತ್ಯ ಬಳಗದ ಲಾಂಛನ ಬಿಡುಗಡೆ ಮಾಡಿ ಸಾಹಿತ್ಯ ಎನ್ನುವುದು ಹಿರಿಯರ ಸ್ವತ್ತು ಆಗಿತ್ತು. ಈಗಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಹ ಭಾಗಿಯಾದ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದರು.
ಪುತ್ತೂರು ತಾಲೂಕು ಕಸಾಪ ಅದ್ಯಕ್ಷ ಉಮೇಶ್ ನಾಯಕ್ ಅದ್ಯಕ್ಷ ಸ್ಥಾನದಿಂದ ಮಾತನಾಡಿ ಕಸಾಪ ಮಾಡುವ ಕಾರ್ಯಕ್ರಮ ಇಂತಹ ಸಂಸ್ಥೆಗಳ ಜೊತೆಯಲ್ಲಿ ಮಾಡಿದರು ಸಾಧಕರನ್ನು ಹುಡುಕಿ ಗೌರವ ನೀಡಲು ನಮಗೂ ಅನುಕೂಲ ಎಂದರು.
ಇದೇ ವೇಳೆಗೆ ಧನ್ವಿತಾ ಕಾರಂತ್ ಅವರ ಶಕ್ತಿಯ ಸೆಲೆ ಹಾಗೂ ಶಿರ್ಷಿತಾ ಕಾರಂತ್ ಅವರ ನನ್ನ ಜಗ ಕೃತಿಗಳನ್ನು ಪ್ರಾದ್ಯಾಪಕರಾದ ಲೀಲಾವತಿ ತೋಡಿಕಾನ ಲೋಕಾರ್ಪಣೆ ಮಾಡಿದರು. ಕೃತಿಗಳ ಬಗ್ಗೆ ಕವಿ ರೇಶ್ಮಾ ಶೆಟ್ಟಿ ಗೊರೂರು ಪರಿಚಯ ಮಾಡಿಕೊಟ್ಟರು.
ಸಾಧಕರಿಗೆ ಸನ್ಮಾನ ನಡೆಯಿತು. ಸುಪ್ರೀತಾ ಚರಣ್ ಹಾಲಪ್ಪೆ,ರಹನಾ,ಪ್ರತೀಕ್ಷ ಆರ್ ಕಾವು, ಇಬ್ರಾಹಿಂ ಖಲೀಲ್,ಉಮಾಶಂಕರಿ ಮರಿಕೆ,ಮಾನಸ ವಿಜಯ ಕೈಂತಜೆ,ವಿಂದ್ಯಾ ಎಸ್ ರೈ,ಅಪೂರ್ವ ಕಾರಂತ್,ಹಿತೇಶ್ ಕುಮಾರ್.
ಕಳೆದ ವರುಷದಲ್ಲಿ ಕೃತಿ ಬಿಡುಗಡೆ ಮಾಡಿದ ಹದಿಮೂರು ಕೃತಿಕಾರರಿಗೂ ಸನ್ಮಾನ ಮಾಡಲಾಯಿತು.
ರಶ್ಮಿತಾ ಸುರೇಶ್ ಸ್ವಾಗತಿಸಿದರು. ನಾರಾಯಣ ಕುಂಬ್ರ ಪ್ರಾಸ್ತಾವಿಕ ಮಾತನಾಡಿದರು. ನವ್ಯಶ್ರೀ ವಂದಿಸಿದರು.ರಾಧಾಕೃಷ್ಣ ಎರುಂಬು ನಿರೂಪಿಸಿದರು