ಲೊರೆಟ್ಟೊ, ಏಪ್ರಿಲ್ 07: ಯೇಸು ಕ್ರಿಸ್ತರು ಶಿಲುಬೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ದಿನವಾದ ಶುಭ ಶುಕ್ರವಾರದಂದು ಲೋರೆಟ್ಟೋ ಮತಾ ಚರ್ಚ್ ನಲ್ಲಿ ಶಿಲುಬೆಯ ಹಾದಿಯಲ್ಲಿ ಪಾಲ್ಗೊಂಡ ಭಕ್ತಾದಿಗಳು..ಚರ್ಚ್ ಧರ್ಮ ಗುರುಗಳಾದ ವಂ ಫ್ರಾನ್ಸಿಸ್ ಕ್ರಾಸ್ತಾ, ಪ್ರಧಾನ ಧರ್ಮ ಗುರುಗಳಾಗಿ ಮಂಗಳೂರು ಧರ್ಮ ಪ್ರಾಂತ್ಯದ ಕೆನರ  ಕಮ್ಯುನಿಕೇಶನ್ ಸೆಂಟರನ ನಿರ್ದೇಶಕರಾದ ವಂದನೀಯ ಆನಿಲ್ ಫೆರ್ನಾಂಡಿಸ್‌ ಶಿಲುಬೆಯ ಪ್ರಾಣ ತ್ಯಾಗದ ಬಗ್ಗೆ ಪ್ರವಚನ ನೀಡಿ ವಿಶೇಷ ಪ್ರಾರ್ಥನೆಯನ್ನು ಅರ್ಪಿಸಿದರು. ಶಾಲಾ ಮುಖ್ಯೋಪಾಧ್ಯಯರಾದ ವಂ ಜೆಸನ್ ಮೊನಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು.