ಮೂಡುಬಿದಿರೆ: ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಸ್ವಾಮೀಜಿ ಪಾವನ ಸಾನಿಧ್ಯ ಮಾರ್ಗದರ್ಶನದಲ್ಲಿ 06.04.23 ರಂದು ಸಾವಿರ ಕಂಬ ಬಸದಿ ಮೂಡುಬಿದಿರೆಯಲ್ಲಿ ಗುರುವಾರ ಶ್ರಮಣ ಸಂಸ್ಕೃತಿ ಸಮ್ಮೇಳನ ಕಾರ್ಯಕ್ರಮ ದೀಪ ಬೆಳಗಿಸಿ ಸಂಪತ್ ಸಾಮ್ರಾಜ್ಯ ಎಕ್ಷಲೆಂಟ್ ಕಾಲೇಜು ಅಧ್ಯಕ್ಷ ಯುವರಾಜ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಆಶೀರ್ವಾದ ನೀಡಿದ ಭಟ್ಟಾರಕ ಸ್ವಾಮೀಜಿ ವಿಶ್ವದ ಪ್ರಾಚೀನ ಸಂಸ್ಕೃತಿ ಭಾರತೀಯ ಸಂಸ್ಕೃತಿ ಮನುಯುಗ ಕಳೆದ ಮೇಲೆ ಪ್ರಥಮ ಶ್ರಮಣ ಆದಿ ಯೋಗಿ ಅದಿನಾಥರು ಮೋಕ್ಷ ಪಡೆವ ಉಪಾಯ ಇಂದ್ರಿಯ ನಿಗ್ರಹ ಮಾಡಿ ಮನಸ್ಸಿನ ಏಕಾಗ್ರತೆ ಯೋಗದಿಂದ ಧ್ಯಾನದಿಂದ ಜ್ಞಾನ ತಪ ಆರಾಧನೆಯಿಂದ ಗುಣ ಸ್ಥಾನ ಪ್ರಾಪ್ತಿಸಿ ಎಂಟು ಕರ್ಮದ ಬಿಡುಗಡೆಯನ್ನು ಪಡೆಯುವರು ಸರ್ವರೂ ನಿರಾಡಂಬರ ಮುನಿ ಸಾದುಗಳ ಸೇವೆ ಮಾಡಬೇಕು ಎಂದು ತಿಳಿಸಿದರು ಯುವರಾಜ್ ಜೈನ್ ಮಾತನಾಡಿ ಸರ್ವ ಜೀವಿ ದಯಾಪರ ಧರ್ಮ ಜೈನ ಧರ್ಮ ವಿಧ್ಯೆಗೆ ಮಹತ್ತ್ವ ಕೊಟ್ಟು ಬದುಕು ಸುಂದರಗೊಳಿಸುವ ಎಂದು ಶುಭ ಹಾರೈಸಿದರು.
ಈ ಸಂಧರ್ಭ ಸ್ವಾಮೀಜಿ ಸಂಪತ್ ಸಾಮ್ರಾಜ್ಯ, ಯುವರಾಜ್ ಜೈನ್ ವಾಲಗ ಸುರೇಶ್, ರಣ ಕಹಳೆ ಸೀತರಾಮ್, ಚಂದ್ರ ಕೀರ್ತಿ ಇವರನ್ನು ಹರಸಿ ಶಾಲು ಸ್ಮರಣಿಕೆ ನೀಡಿ ಆಶೀರ್ವಾದಮಾಡಿದರು. ಸಾವಿರ ಕಂಬ ಬಸದಿಯಲ್ಲಿ ಬೆಳಿಗ್ಗೆ 11.45ಕ್ಕೆ ಪೂರ್ವಚಾರ್ಯರ ಚರಣ ಪೂಜೆ ಅಭಿಷೇಕ ಹಿರಿಯ ರಥೋತ್ಸವ ಅಂಗವಾಗಿ ಮಧ್ಯಾಹ್ನ ಶ್ರೀ ಚಂದ್ರ ನಾಥ ಸ್ವಾಮಿ ಶ್ರೀ ದೇವರ ರಥರೋಹಣ ಹಗಲು ರಥೋತ್ಸವ ಸಂಜೆ ರಥ ರೋಹಣ ರಾದ ಭಗವಂತರ ಸಮವಸರಣ ಪೂಜೆ ಭಗವಾನ್ ಚಂದ್ರ ಪ್ರಭ ಸ್ವಾಮಿ 108 ಕಲಶ ಅಭಿಷೇಕ ಶ್ರೀ ಬಲಿ ಉಸ್ಸವ ಬಸದಿಯಲ್ಲಿ ಸ್ವಾಮೀಜಿ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ನೆರವೇರಿತು.
ಸುದರ್ಶನ್ ಶಾಂತಿ ಮಂತ್ರ ಪಠಿಸಿದರು,ಶ್ರೀ ಶ್ವೇತಾ ವಕೀಲರು ಕಾರ್ಯಕ್ರಮ ನಿರೂಪಿದರು. ನೇಮಿರಾಜ್ ಧನ್ಯವಾದ ಹೇಳಿದರು ಅಭಯ ಚಂದ್ರ ಜೈನ್,ಉದ್ಯಮಿ ಶೈಲೇoದ್ರ ಮುಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್, ದಿನೇಶ್,ಆದರ್ಶ್, ಸುಧಾ ಪಾರ್ಶ್ವ ನಾಥ್, ಗುಣಪಾಲ್ ಹೆಗ್ಡೆ, ಶಂಭವ್ ಕುಮಾರ್ ಮೊದಲದವರು ಉಪಸ್ಥಿತರಿದ್ದರು.
ರಾತ್ರಿ 8.35ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ ಅನನ್ಯರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು ಬಳಿಕ ಹಿರಿಯ ರಥೋತ್ಸವ ಜರುಗಿತು.