ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:- ಸ್ಥಳೀಯ ಪುರಸಭೆಯ ಕಣ್ಣಳತೆಯಲ್ಲಿರುವ ಬಸ್ಸು ನಿಲ್ದಾಣದ ಹಲವಾರು ತೊಂದರೆಗಳ ಬಗ್ಗೆ, ಲೋಪದೋಷಗಳ ಬಗ್ಗೆ‌ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಸತತವಾಗಿ ಅಧಿಕಾರಿಗಳು, ವಾರ್ಡ್ ಸದಸ್ಯರುಗಳು ಇತ್ಯಾದಿಯರ ಗಮನ ಸೆಳೆಯಲಾಗುತ್ತಿದೆ. ಆದರೆ ಎಷ್ಟೇ ಪ್ರಯತ್ನಿಸಿದರು ಪುರಸಭಾ ಅಧಿಕಾರಿಗಳಾಗಲಿ, ವಾರ್ಡ್ ಕೌನ್ಸಿಲರ್ ಗಳಾಗಲಿ, ಅಧ್ಯಕ್ಷ ಉಪಾಧ್ಯಕ್ಷರು ಗಳಾಗಲಿ, ಸ್ಥಳೀಯ ಶಾಸಕರು ಕೂಡ ಈ ಬಗ್ಗೆ ಗಮನ ಹರಿಸದೆ ಇರುವುದು ಈ ಕೆಲವು ಇಂದಿನ ತಾಜಾ ಛಾಯಾಚಿತ್ರಗಳಿಂದ ಸಾಬೀ ತಾಗುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ಕಳೆದ ಎರಡು ತಿಂಗಳಿಂದ ಮೂರು ನಾಲ್ಕು ಬಾರಿ ಮಾಧ್ಯಮಗಳಲ್ಲಿ ಗಮನ ಸೆಳೆಯಲಾಗಿತ್ತು. ಸ್ಥಳೀಯ ರಿಕ್ಷಾ ಚಾಲಕರು ಮಾಲಕರು, ಬಸು ನಿಲ್ದಾಣದ ಬಸ್ ಏಜೆಂಟುಗಳು, ಸಾರ್ವಜನಿಕರು ಕೂಡ ಇಂದಿನ ಈ ಫೋಟೋ ತೆಗೆಯುವುದಕ್ಕೆ ತಮ್ಮ ಪೂರ್ಣ ಸಹಕಾರವನ್ನು ಹಾಗೂ ಪುರಸಭೆಯ ದಿವ್ಯ ನಿರ್ಲಕ್ಷದ ಬಗ್ಗೆ ಮತ್ತೊಮ್ಮೆ ಎಚ್ಚರಿಸಲು ಬೇಡಿಕೊಂಡಿರುತ್ತಾರೆ. 

ಬಸ್ಸು ನಿಲ್ದಾಣದಿಂದ ತಾಲೂಕು ಪಂಚಾಯತ್ ಕಚೇರಿಯವರೆಗಿನ ರಸ್ತೆಯಲ್ಲಿ ಇರುವ ಹೊಂಡ ಗುಂಡಿಗಳು ತಾಜಾ ಉದಾಹರಣೆ. ಬಸ್ಸು ಇತ್ಯಾದಿ ವಾಹನಗಳು ಪ್ರಯಾಣಿಕರನ್ನು ಓಲಾಡಿಸುತ್ತಾ ಕೊಂಡೊಯ್ಯಬೇಕಿದ್ದಲ್ಲಿ ದಯವಿಟ್ಟು ಎಲ್ಲಾ ಪ್ರಯಾಣಿಕರು ಮೂಡುಬಿದರೆ ಬಸ್ಸು ನಿಲ್ದಾಣದಿಂದ ಆಸ್ಪತ್ರೆಯ ತನಕದ ರಸ್ತೆಯಲ್ಲಿ ದಿನಕ್ಕೆ ನೂರಾರು ಬಾರಿ ಚಲಿಸಬಹುದಾಗಿದೆ ಅಷ್ಟು ಉತ್ತಮವಾದಂತಹ ತೂಗುಯ್ಯಾಲೆಯ ರಸ್ತೆಯನ್ನು ಮೂಡುಬಿದಿರೆ ಪುರಸಭೆಯವರು ಸ್ಥಾಪಿಸಿದ್ದಾರೆ ಎನ್ನುವುದಕ್ಕೆ ಅತೀವ ಸಂತೋಷವಾಗುತ್ತಿದೆ. ಕನಿಷ್ಠ ಪಕ್ಷ ಆ ಹೊಂಡಗುಂಡಿಗಳಿಗೆ ಜಲ್ಲಿ ಡಾಮರು ಹಾಕುವ ಪ್ರಕ್ರಿಯೆಯನ್ನು ಕೂಡ ಕಳೆದ ಎರಡು ತಿಂಗಳಿಂದ ಪುರಸಭೆಯವರು ಮಾಡಿರುವುದಿಲ್ಲ. ಬಸ್ಸು ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಕಂಡುಬರುವ ದಿನಕ್ಕೆ ಸಾವಿರಗಟ್ಟಲೆ ನೀರು ಸೋರಿಕೆಯಾಗುತ್ತಿರುವ ಒಂದು ಪೈಪನ್ನು ಕೂಡ ಇವರಿಗೆ ಸರಿಪಡಿಸಲು ಕಳೆದ ನಾಲ್ಕು ತಿಂಗಳಿಂದ ಸಾಧ್ಯವಾಗಿಲ್ಲ. ಸುಮಾರು 15 ದಿನಗಳಿಗೆ ಹಿಂದೆ ನೀರು ಕಕ್ಕುವ ಪೈಪಿನ ಸುತ್ತ ನಾಲ್ಕಾರು ಕಲ್ಲುಗಳನ್ನು ಇಟ್ಟು ರಿಕ್ಷಾ ಸ್ಟ್ಯಾಂಡಿನವರು ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದರು. ಆದರೆ ಒಂದು ಕಾರು ಆ ಕಲ್ಲಿಗೆ ಡಿಕ್ಕಿಯಾಗಿ ಅಪಘಾತವಾದ ಕಾರಣದಿಂದಾಗಿ ಪ್ರಸ್ತುತ ಆ ಕಲ್ಲುಗಳನ್ನು ಕೂಡ ಅಲ್ಲಿಂದ ನಿವಾರಿಸಲಾಗಿದೆ. ಇಂತಹ ಪುರಸಭೆಯಲ್ಲಿರುವ ಅಧಿಕಾರಿಗಳು, ಅಧ್ಯಕ್ಷರು ಉಪಾಧ್ಯಕ್ಷರು, ಕೌನ್ಸಿಲರ್ ಗಳ ಉಪಯೋಗ ಮೂಡುಬಿದರೆ ಪುರಸಭೆಗೆ, ನಾಗರಿಕರಿಗೆ ಅಗತ್ಯವಿದೆಯೇ. ನಾಗರಿಕರೇ ದಯವಿಟ್ಟು ಯೋಚಿಸಿ ಇಂತಹ ಅಧಿಕಾರಿಗಳು, ಅಧ್ಯಕ್ಷ ಉಪಾಧ್ಯಕ್ಷರು, ಕೌನ್ಸಿಲರ್ಗಳು ನಿಮ್ಮ ನಿಮ್ಮ ಪ್ರದೇಶಕ್ಕೆ ಎಷ್ಟರಮಟ್ಟಿಗೆ, ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಿರುತ್ತಾರೆ ಎನ್ನುವುದನ್ನು ದಯವಿಟ್ಟು ಮತ್ತೊಮ್ಮೆ ಯೋಚಿಸಿ, ಆಲೋಚಿಸಿ, ಮುಂದಿನ ಕಾರ್ಯಕ್ಕೆ ಮುಂದಾಗಿ.