ಕಣ್ಣಿಗೆ ಕಾಣುವ ದೇವರೆಂದರೆ ಅದು ಅಮ್ಮ ಅವಳಿಲ್ಲದ ಪ್ರಪಂಚವಿಲ್ಲ ಮನೆಯ ಸದಸ್ಯರನ್ನ ಒಟ್ಟಾಗಿ ಜೋಡಿಸಿಟ್ಟ ಕೊಂಡಿ, ಎಲ್ಲರನ್ನು ನಿಷ್ಕ್ಮಶವಾಗಿ ಪ್ರೀತಿಸುವಳು ಅದಕ್ಕೆ ಹೇಳುವುದು, ಅವಳೊಂದು ಪ್ರೀತಿಯ ಶಿಖರ ತ್ಯಾಗದ ಆಗರ ಮಮತೆಯ ಸಾಗರ. ಅವಳ ಪ್ರೀತಿ ನೆನೆಯಲು ಒಂದು ದಿನ ಸಾಕೇ...?ಉಸಿರಿಗೆ ಹೆಸರು ನೀಡಿದವಳು.

ನನ್ನ ಪ್ರತಿ ಬರಹಗಳ ಮೊದಲ ಓದುಗಳು ಅವಳು ನನ್ನ ಪ್ರತಿ ಶಬ್ಧದ ಸ್ವಾರಸ್ಯಕರ ಅರ್ಥ ಅವಳ ಜಗತ್ತು ವಿಶಾಲವಾಗಿದ್ದರೂ ಅವಳ ಮಡಿಲೆ ನನಗೆ ನೆಮ್ಮದಿಯ ತಾಣ... 

ನನ್ನ ನಗುವಿನ್ನಲ್ಲೆ ತನ್ನ ದುಃಖ ಮರೆತವಳು 

ನನ್ನ ಸಂತಸಕೆ ಸಂಭ್ರಮಿಸಿದವಳು

ಏನೆಂದು ವರ್ಣಿಸಲಿ ನಿನ್ನ, ಪದಗಳಿಲ್ಲ ಈ ದಿನ

ಉಸಿರು ನೀಡಿದ ದೇವತೆಯನ್ನಲಾ

ಸದಾ ನನ್ನ ಹಾರೈಸುವ ಜೀವ

ನನ್ನ ಬದುಕಿನ ಸಂಜೀವಿನಿ ಅಮ್ಮನೆಂಬ ಅಮೃತ...

ಭೂಮಿಗೆ ನನ್ನ ತಂದವಳಿಗೆ ಭೂಮಿಯಷ್ಟೆ ಸಹನಾ ಶಕ್ತಿ...ಮಗುವಿನ ಮನಸ್ಸು 

ಬದುಕಿನಲ್ಲಿ ನಾವು ಅವರಿವರ ಕತೆಗಳಿಂದ ಕಲೆಯುವುದಕ್ಕಿಂತ ಒಮ್ಮೆ ಅಮ್ಮನ ಕತೆ ಕೇಳಿ ಬಿಡಿ ಸಾಕಷ್ಟು ಕಲಿಯಬಹುದು ತಿಳಿಯಬಹುದು...

ಒಬ್ಬ ತಾಯಿಗಿಂತ ಸ್ಪೂರ್ತಿ ಮತ್ಯಾರಿರಲು ಸಾಧ್ಯ...

ಕಷ್ಟನೊ ಸುಖನೊ ಪ್ರತಿ ಹೆಜ್ಜೆಯಲ್ಲಿ ಬದುಕಿನ ಏರಿಳಿತಗಳನ್ನ ದಾಟಿ ...ಹೇಳದೆ ತಿಳಿಯುವ ಕೌಶಲ್ಯತೆ ಅವಳಲ್ಲಿದೆ...ತನ್ನ ಕೈಲಾದಷ್ಟು ಸಹಾಯ ಮಾಡುವ ಗುಣ ಇದೆ ಅದಕ್ಕೆ ಜನ ಅವರೆಲ್ಲಿದ್ದರು ಬಂದು ಭೇಟಿಯಾಗಿ ಒಳ್ಳೆ ಮಾತಾಡಿ ಹೋಗತಾರೆ.

ಅಮ್ಮನಿಗೆ ಬಹುದಿನಗಳ ನಂತರ  ಒಬ್ಬರೂ ಭೇಟಿಯಾದಾಗಿದ್ರೂ ನನಗೆ ಪರಿಚಯ ಇರಲಿಲ್ಲ

ನಿಮ್ಮಮ್ಮ ಅಪ್ಪಟ ಚಿನ್ನ ನಮ್ಮ ಅವಳ ಅನ್ನ ತಿಂದು ಬೆಳೆದವರ ನಾವು ಮರೆಯಲಾಗದ ವ್ಯಕ್ತಿ ಅಂತ ಅದೆಷ್ಟು ಸಂತಸದಿಂದ ಹೇಳತಿದ್ದರಂದ್ರೆ ಅವರ ಕಣ್ಣಂಚು ಒದ್ದೆಯಾಗಿತ್ತು.

ನೀ ನಿನ್ನಮ್ಮನ ಅಚ್ಚು ಹಾಗೇ ಇದ್ದಿಯ ಅಂತ ಹೇಳಿದಾಗ...ನನ್ನ ಮೊಗದಲ್ಲಿ ಮುಗುಳ್ನಗುವಿನ ಜೊತೆ ಹೆಮ್ಮೆ ಕೂಡ...ನಾ ನನ್ನಮ್ಮ ತರಹ ಎಂದರೆ ನನಗೆ ಸಂತೋಷದ ಜೊತೆ ಹೆಮ್ಮೆನು ಆಗುತ್ತೆ ಯಾಕೆಂದರೆ ಅವಳೆಂದರೆ ವಿಶಿಷ್ಟ ಅವಳಂತೆ ಯಾರು ಇಲ್ಲ ಅವಳ ಗುಣದಂತೆ ಒಂಚೂರಾದರೂ ನಾನಾದರೆ ಅದಕ್ಕಿಂತ ಸಾರ್ಥಕತೆ ಉಂಟಾ...?


ಅಮ್ಮಂದಿರ ದಿನದ  ಶುಭಾಶಯಗಳು ಅಮ್ಮ

ಐ ಲವ್ ಯೂ ಅಮ್ಮ...

✍ಅಂಜಲಿ ಶ್ರೀನಿವಾಸ್