ಗೌರವ ಕೇಳಿ ಪಡೆಯುವ ಉಡುಗೊರೆಯಲ್ಲ ಬೇರೆಯವರಲ್ಲಿ ಉತ್ತಮ ಗುಣ ಕಾಣವವನು ಶ್ರೇಷ್ಠನೆನಿಸಿಕೊಳ್ಳುವನು.ನಮ್ಮಲ್ಲಿರಬೇಕಾದ ನಿಜವಾದ ಸಂಪತ್ತೆಂದರೆ ಅದು ಮತ್ತೊಬ್ಬರ ಆಲೋಚನೆಗಳನ್ನು ಗೌರವಿಸುವುದು.ಬದುಕಿನಲ್ಲಿ ಹೊಂದಾಣಿಕೆ ಸಹಬಾಳ್ವೆ ಅತ್ಯಗತ್ಯ

ತನಗಿಂತ ಬೇರೆ ವಿಚಾರ ಭಿನ್ನ ವ್ಯಕ್ತಿತ್ವ ಭಿನ್ನ ಶ್ರದ್ಧೆ ಹೊಂದಿದ ವ್ಯಕ್ತಿಯನ್ನು ದೂಷಿಸುತ್ತಾನೆ ನಿಂದಿಸುತ್ತಾನೆ ಹೊಸಕಿ ಹಾಕುವೆ ನಿರ್ನಾಮ ಮಾಡುವೆ ಎಂಬ ಮಾತುಗಳು ಆಗಾಗ ನಮ್ಮ ಸುತ್ತ ಮುತ್ತಲಿನ ಜನರಿಂದ ಕೇಳಿಯೆ ಇರುತ್ತೆವೆ.ಅವರ ಈ ಸಣ್ಣತನ ದಡ್ಡತನಕ್ಕೆ ಏನು ಹೇಳಬೇಕೊ ಎಂದು ಮನದಲ್ಲಿ ನಕ್ಕು ಮೌನವಾಗತೆನೆ.ನಾವು ಯಾವಾಗ ಆಲಿಸುವುದನ್ನು ಕಲಿತಿವೊ ಬಹಳಷ್ಟು ಪಡೆದು ಕೊಳ್ಳುತ್ತೆವೆ. ಅಹಂಕಾರ ಅಲಂಕರಿಸಿಕೊಂಡವನಿಗೆ ಕೊನೆಗೆ ಅಜ್ಞಾನ ಒಂಟಿತನ ಕಟ್ಟಿಟ್ಟ ಬುತ್ತಿ. ಯಾವುದೆ ವಿಚಾರಕ್ಕಾಗಿ ನಮ್ಮಲ್ಲಿ ವೈಮನಸ್ಸು ಬಂದಿದ್ದರೆ.ಗೌರವವಾಗಿಯೇ ನಿಮ್ಮ ಬಗ್ಗೆ ಗೌರವವಿದೆ ನಿಮ್ಮ ಅಭಿಪ್ರಾಯ ನನಗೆ ಒಪ್ಪಿಗೆಯಾಗುತ್ತಿಲ್ಲ ಎಂಬ ಮಾತು ಸೌಜನ್ಯತೆ ಮರೆಯಾಗಿ ತಾಳ್ಮೆ ಎಂಬುವುದು ಅದಾವ ಕಡಲಲ್ಲಿ ಮುಳುಗಿದೆಯೊ ಬರೀ ನಿಂದಿಸುವ ನಾಲಿಗೆ ತನ್ನಲ್ಲಿರುವ ವಂದಿಸುವ ಸ್ವಭಾವಗಳು ಕೂಡ ನಂದಿ ಹೋಗಿಸುತ್ತದೆ

ನಮ್ಮ ಅಸೂಯೆಯು ಇನ್ನೊಬ್ಬರ ದೃಷ್ಟಿಯಲ್ಲಿ ನಮ್ಮನ್ನೆ ಅಸಹ್ಯವಾಗಿಸುತ್ತೆಂಬುವುದು ನೆನಪಿರಲಿ. ಕೋಪದ ಕೈಗೆ ಬುದ್ದಿಯನ್ನು ಕೊಟ್ಟು ಏನು ಮಾತಾಡತಿದ್ದಿವಿ ಎಂಬುವುದು ಅರಿವಿರದೆ ಮಾತಾಡವುದು.ಒಳದನಿಯು ತಪ್ಪೆಂದು ಹೇಳಿದರು. ಆ ದನಿಯನ್ನು ಅದುಮಿ ಬುದ್ದಿಗೆ ಮಂಕು ಬಡಿಸಿಕೊಂಡು ತನ್ನ  ಬದುಕಿನ ತನ್ನ ಕೈಯಾರೆ ಬೆಂಕಿ ಹಚ್ಚಿಕೊಳ್ಳುವ ಮನಸ್ಸಿನವರು ತನ್ನ ಸುತ್ತಮುತ್ತಲಿನವರನ್ನು ಕೂಡ ದಹಿಸಿ ಬಿಡುತ್ತಾರೆ.

ಮಾತು  ಆಂತರ್ಯದ ಪ್ರತಿಫಲನ ಮನಸ್ಸಿನಲ್ಲಿ ಮೂಡಿದ ಮಾತಾಗುತ್ತೆ ಆ ಮಾತು ಶುದ್ಧವಾಗಿರಲಿ ಕೇಳುಗನಿಗೆ ಜ್ಞಾನದ ತುತ್ತಾಗಬೇಕು.ಅದು ಕುತ್ತಾಗಬಾರದು ಅಲ್ಲವೇ...?ಒಳ್ಳೆ ಮಾತಾಡಿದರೆ ಆಗುವ ನಷ್ಟವಾದರೂ ಏನು..?

ಯಾರಲ್ಲಿಯಾದರೂ ದ್ವೇಷ ಅಸಮಾಧಾನವಿದ್ದರೆ..ಮೊದಲು ಅವರ ಬಗ್ಗೆ ಮಾತಾಡುವುದು ನಿಲ್ಲಿಸಬೇಕು.ನಿಂದನೆಯ ಮಾತುಗಳ ದುಷ್ಪರಿಣಾಮ ನಾವಿದ್ದ ವಾತಾವರಣವನ್ನು ಗಬ್ಬೆಬ್ಬಿಸುತ್ತದೆ. ಬಿತ್ತಿದ ರೋಗ ಸಾಂಕ್ರಾಮಿಕವಾಗುತ್ತ  ಅದಕ್ಕೆ ಬಿತ್ತಿರುವವರು ಕೂಡ ಬಲಿಯಾಗತಾರೆ.

ಮೌನ ಚಿಂತನೆ ಮಾಡುತ್ತ ನಮ್ಮನ್ನ ನಾವು ವಿಮರ್ಶಿಸಿಕೊಳ್ಳುತ್ತ ಪರಸ್ಪರ ಗೌರವಿಸುತ್ತ ಸಾಗಬೇಕು. ಹೊಂದಿಕೊಂಡು ಬಾಳುವುದು ಕೈಲಾಸದಲ್ಲಿ ಮಾತ್ರವಲ್ಲ. ನಾವಿದ್ದಲ್ಲಿಯೇ ಸ್ವರ್ಗ ನರಕ ನಾವೇ ಸೃಷ್ಟಿಸಿಕೊಳ್ಳುತ್ತೆವೆ. ಸಂತಸ ಹಂಚಿದರೆ ಸ್ವರ್ಗ ಅಸೂಯೆಯಲ್ಲಿ ಮುಳುಗಿದರೆ ನರಕ. ಸಾಹಿತ್ಯ ಅಂತರಾಳದ ಪ್ರಜ್ಞೆಯ  ಅತ್ಯುತ್ತಮ ಸಾಧನ ನಮ್ಮ ಮನಸ್ಸನ್ನು ಆವರಿಸಿದ ಜಡ ದಣಿವು ಮಂಕನ್ನು ತೊಲಗಿಸುತ್ತದೆ ಒಳ್ಳೆ ವಿಚಾರಗಳಿಂದ ಸಾಹಿತ್ಯದ ಒಲವು ಬದುಕಿನ ಗೆಲವು.


-By ಅಂಜಲಿ ಶಿದ್ಲಿಂಗ್