ಒಂದು ಪುಟ್ಟ ಹಳ್ಳಿಯಲ್ಲಿ ಸುಮಾರು ವರ್ಷಗಳ ಹಿಂದೆ, ಒಂದು ಕುಟುಂಬವಿತ್ತು. ಆ ಮನೆಯ ಯಜಮಾನನಿಗೆ 7ಜನ ಮಕ್ಕಳಿದ್ದರು. ದುಡಿದು ತಿನ್ನಲು ಬಹಳಷ್ಟು ಜಮೀನೂ ಇತ್ತು. ಆ 7 ಜನ ಮಕ್ಕಳಲ್ಲಿ 5ನೆಯವನು ವಿದ್ಯಾವಂತ. ದೇಶದ ಪ್ರತಿಷ್ಟಿತ ಹುದ್ದೆಯೊಂದಕ್ಕೆ ಸೇರಲು ಇಚ್ಚಿಸಿ, ತುಂಬಾ ಕಷ್ಟ ಪಟ್ಟು ಓದಿದರು. ಪರೀಕ್ಷೆಯಲ್ಲಿ ನಮ್ಮ ರಾಜ್ಯಕ್ಕೆ 6 ನೇ ಸ್ಥಾನದಲ್ಲಿ ರ್ಯಾಂಕ್ ಪಡೆದರು. ಆದರೆ ಕೆಲಸಕ್ಕೆ ಸೇರಲು ಹೋದಾಗ, ಅಧಿಕಾರಿಗಳು 2.50.000ರೂ ಲಂಚವನ್ನು ಕೇಳುತ್ತಾರೆ.

ಲಂಚದ ವಿಷಯವನ್ನು ಆ ಯುವಕ ಮನೆಯಲ್ಲಿ ಬಂದು ಹೇಳಿದಾಗ ಅವನ ಅಪ್ಪ ಅಂದರೆ ಆ ಮನೆಯ ಯಜಮಾನ ಅಷ್ಟು ವಿದ್ಯಾವಂತನಲ್ಲದ ಕಾರಣದಿಂದ ಹಣ ನೀಡಲು ಒಪ್ಪುವುದಿಲ್ಲ.

ಆಗ ಆ ಯುವಕ ಅಪ್ಪನ ಆಸ್ತಿಯಲ್ಲಿ ಪಾಲು ಕೇಳಿ, ತನ್ನ ಪಾಲಿಗೆ ಬಂದ ಆಸ್ತಿಯನ್ನು ಮಾರುತ್ತಾನೆ. ಇಷ್ಟಲ್ಲಾ ಸಮಸ್ಯೆಗಳ ಮಧ್ಯೆ ಹಣ ಹೊಂದಿಸಿಕೊಂಡು ತಂದು ಕೆಲಸಕ್ಕೆ ಕಟ್ಟುವಷ್ಟರಲ್ಲಿ ಕೆಲಸ ಇನ್ನೊಬ್ಬರ ಪಾಲಾಗಿ ಹೋಗಿರುತ್ತದೆ.

ಇದರಿಂದ ತುಂಬಾ ಬೇಸರಗೊಂಡ ಯುವಕ, ಹಣವನ್ನು

ಮತ್ತೊಬ್ಬ ವ್ಯಕ್ತಿಯನ್ನು ನಂಬಿ ಅವನೊಂದಿಗೆ ಬ್ಯಸಿನೆಸ್ ಮಾಡಲು ಕೈ ಜೋಡಿಸುತ್ತಾನೆ. ಆದರೆ ಹಣವನ್ನು ಪಡೆದ ವ್ಯಕ್ತಿ ಯುವಕನಿಗೆ ಮೋಸ ಮಾಡಿ, ಹಣವನ್ನು ದೋಚಿಕೊಂಡು ಪರಾರಿಯಾಗುತ್ತಾನೆ.

ಇದರಿಂದ ಆ ಯುವಕ ಇತ್ತ ಮನೆಯವರ ಪ್ರೀತಿ ವಿಶ್ವಾಸದ ಜೊತೆ ಆಸ್ತಿ ಹಣವನ್ನು ಕಳೆದುಕೊಂಡು ಬೀದಿಗೆ ಬರುತ್ತಾನೆ. ಮೋಸದ ಜಗತ್ತಿನಿಂದ ಕುಗ್ಗಿ ಹೋಗುತ್ತಾನೆ. ಮುಂದೆ ಏನು ಮಾಡುವುದೆಂದು ಅರಿಯದೆ ಅಲೆಮಾರಿಯಂತೆ ಅಲಿಯುತ್ತಿರುತ್ತಾನೆ.

ಹೀಗಿರುವಾಗ ಒಂದು ದಿನ ಈ ಯುವಕನಿಂದ ಹಣ ಪಡೆದು ಮೋಸ ಮಾಡಿದ ವ್ಯಕ್ತಿ ಇವನಿಗೆದುರಾಗುತ್ತಾನೆ. ಆಗ ಆ ವ್ಯಕ್ತಿಯ ಬಳಿ ಮತ್ತೆ ತನ್ನ ಹಣವನ್ನು ಮರಳಿ ಕೇಳಿದಾಗ ಆ ವ್ಯಕ್ತಿ ಹಣ ನೀಡದೆ ಈ ಯುವಕನ ತಲೆ ಕೆಡಿಸಿ ತನ್ನ ಮೋಸದ ವ್ಯವಹಾರಕ್ಕೆ ಸೇರಿಸಿಕೊಂಡು ತನ್ನಂತೆ ಮೋಸಗೊಳಿಸಿ ಹಣ ಸಂಪಾದಿಸುವ ದಾರಿಯನ್ನು ಕಲಿಸುತ್ತಾನೆ. ಜೀವನದ ದಾರಿ ತಿಳಿಯದೆ ಅಲೆಮಾರಿಯಂತೆ ಇದ್ದ ಯುವಕ ಸುಲಭವಾಗಿ ಹಣ ಮಾಡುವ ಆಸೆಯಿಂದ ಮೋಸದ ಜಾಲಕ್ಕೆ ಸಿಕ್ಕಹಾಕಿಕೊಳ್ಳುತ್ತಾನೆ. ಇತ್ತ ಆ ಯುವಕನ ಅಣ್ಣ ತಮ್ಮಂದಿರು ಕುಡಿತದ ಚಟದಲ್ಲಿ ಆಸ್ತಿಯನ್ನು ಸ್ವಲ್ಪ ಸ್ವಲ್ಪವೇ ಕಳೆದುಕೊಳ್ಳತ್ತಾ ಬರುತ್ತಾರೆ.

ಇಂದು ಆ ಯುವಕ ಮೋಸ ಮಾಡುವುದನ್ನೆ ವೃತ್ತಿಯಾಗಿಸಿಕೊಂಡು ಲಕ್ಷ ಲಕ್ಷ ಹಣ ಸಂಪಾದಿಸುತ್ತಾ ಒಬ್ಬ ರೌಡಿಯಾಗಿ ರೂಪುಗೊಂಡಿದ್ದಾನೆ.


ಒಬ್ಬ ಒಳ್ಳೆಯ ವಿದ್ಯಾವಂತ, IAS ನಂತಹ ಪ್ರತಿಷ್ಠಿತ ಕೆಲಸಕ್ಕೆ ಹೋಗಬೇಕಾಗಿದ್ದ ಯುವಕ ಇಂದು ರೌಡಿಯಾಗಿರುವುದಕ್ಕೆ ಕಾರಣ ವಿಧಿಯಾ ಆಟವಾ? ಭ್ರಷ್ಟ ಅಧಿಕಾರಿಗಳ? ಅಥವಾ ನಮ್ಮ ಸಮಾಜದ ಕೆಟ್ಟು ಕೆರ ಹಿಡಿದಿರೊ ಲಂಚಗುಳಿತನದ ವ್ಯವಸ್ಥೆಯೋ?...


-ಪಲ್ಲವಿ ಚೆನ್ನಬಸಪ್ಪ ✍