ತೆಲಂಗಾಣದ ಕರೀಂನಗರದಲ್ಲಿ ಪೋಲೀಸು ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ನಡೆಸಿ ಪೋಲೀಸರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಬಿಜೆಪಿ ಮುಖ್ಯಸ್ಥ ಬಂದಿ ಸಂಜಯ ಕುಮಾರ್ ಮತ್ತು ಅವರ ಅನುಯಾಯಿಗಳನ್ನು ಬಂಧಿಸಲಾಯಿತು.
ಜಾಗರಣ್ ದೀಕ್ಷಾ ಪ್ರತಿಭಟನೆ ನಡೆಸಿದ ಕರೀನಗರ ಸಂಸದರೂ ಆದ ಸಂಜಯ ಕುಮಾರ್ ಪೋಲೀಸರೊಡನೆ ತಾಕಲಾಟಕ್ಕೆ ಬಿದ್ದುದು ಬಂಧನಕ್ಕೆ ಕಾರಣ. ಮನಕೊಂಡುರಿ ಠಾಣೆಗೆ ಕರೆತಂದು, ಪೋಲೀಸು ತರಬೇತಿ ಕೇಂದ್ರದಲ್ಲಿ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿ ಕೋರ್ಟಿನತ್ತ ನಡೆಸಲಾಯಿತು.