ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತದ ಅವನಿ ಲೇಖರಾ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ನ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ 250.6 ಅಂಕ ಗಳಿಸಿ ವಿಶ್ವ ದಾಖಲೆಯೊಡನೆ ಬಂಗಾರ ಗೆದ್ದರು.

ಅವರು 249.6 ಅವರದೇ ಸ್ಕೋರ್ ದಾಖಲೆ ಮುರಿದು ಕನಕ ಸಾಧಿಸಿದರು. ಪೋಲೆಂಡ್‌ನ ಎಮಿಲಿಯಾ ಬೆಳ್ಳಿ ಗೆದ್ದರೆ, ಸ್ವೀಡನ್ನಿನ ಅನ್ನಾ ನಾರ್ಮನ್ ಕಂಚು ಗೆದ್ದರು.