ಸರಕಾರವು ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜಿಸಿರುವುದರಿಂದ, ಅವರಿಂದ ವರದಿ ಪಡೆಯದೆ ಪಿಯುಸಿ ಎರಡನೆಯ ವರುಷದ ಹಳೆಯ ಪಠ್ಯವನ್ನೇ ಮುಂದುವರಿಸಲಾಗುವುದು ಎಂದು ಶಿಕ್ಷಣ ಮಂತ್ರಿ ಬಿ. ಸಿ. ನಾಗೇಶ್ ಹೇಳಿದರು.
ಬಸವಣ್ಣನವರ ಬಗೆಗೆ ಹಿಂದಿನ ಬರಗೂರು ರಾಮಚಂದ್ರಪ್ಪ ಸಮಿತಿ ಸಂಯೋಜಿಸಿದ ಹಳೆಯ ಪಠ್ಯವನ್ನೇ ಮುಂದುವರಿಸಲಾಗುತ್ತದೆ. ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸಹ ಶಿಕ್ಷಣ ಮಂತ್ರಿಗಳು ಹೇಳಿದರು.