ಪರಿಸರ ಕಾನೂನು ಮತ್ತು ನಿಯಮಗಳ ಕೊಲಂಬಿಯಾ ವಿಶ್ವವಿದ್ಯಾನಿಲಯದ ಯೇಲ್ ಪರಿಸರ ಕೇಂದ್ರವು 2022ರ ಪರಿಸರ ಸೂಚ್ಯಂಕ ಬಿಡುಗಡೆ ಮಾಡಿದ್ದು, ಭಾರತವು 180 ದೇಶಗಳಲ್ಲಿ ನಿಕೃಷ್ಟ ಸ್ಥಾನದಲ್ಲಿದೆ.
ಡೆನ್ಮಾರ್ಕ್, ಬ್ರಿಟನ್, ಫಿನ್‌ಲ್ಯಾಂಡ್‌ಗಳು ಪರಿಸರ ಸ್ನೇಹಿ ಬದುಕಿನಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇವೆ. ಸಿಓ2 ಹತೋಟಿಗೆ ಈ ದೇಶಗಳು ಉತ್ತಮ ಕ್ರಮ ಕೈಗೊಂಡಿವೆ.
ಅಮೆರಿಕವು 43ನೇ ಮತ್ತು ರಶಿಯಾ 102ನೇ ಸ್ಥಾನದಲ್ಲಿದ್ದರೆ ಭಾರತವು 161ನೇ ಸ್ಥಾನದಲ್ಲಿದೆ. ಭಾರತದ ನೆರೆಹೊರೆಯ ದೇಶಗಳು ಸಹ ಕೊನೆಯಲ್ಲಿವೆ.