ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ಖಚಿತವಾದ್ದರಿಂದ, 90 ಸ್ಥಾನ ಖಚಿತವಾದುದರಿಂದ ನಾನು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವುದಿಲ್ಲ. ಭಗತ್ ಸಿಂಗ್ ಅವರ ಹುಟ್ಟೂರು ಕಟ್ಕರ್‌ಕಲನ್‌ನಲ್ಲಿ ಪ್ರಮಾಣವಚನ ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಆಗುವ ಭಗವಂತ ಮಾನ್ ಹೇಳಿದರು.

ಪಂಜಾಬಿನ ಮುಖ್ಯಮಂತ್ರಿ ಎಂದು ಘೋಷಣೆ ಆಗಿದ್ದ ಭಗವಂತ್ ಮಾನ್ ಅವರು ಧುರಿ ಕ್ಷೇತ್ರದಲ್ಲಿ 58,206 ಮತಗಳ ಅಂತರದಿಂದ ಗೆಲುವು ಕಂಡರು.

ಮಾನ್‌ರ ಹುಟ್ಟೂರು ಸಂಗ್ರೂರ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದ ಮಾನ್ ಅವರು ಭಗತ್ ಸಿಂಗ್ ಅವರ ಕ್ರಾಂತಿಯ ನೆಲದಿಂದ ಅಧಿಕಾರ ಹಿಡಿದು ಸಂಪ್ರದಾಯ ಬದಲಾಯಿಸುವುದಾಗಿ ಹೇಳಿದರು.