ಕೇಂದ್ರದಲ್ಲಿ ಆಡಳಿತ ಹಿಡಿದಿರುವ ಹೇಡಿಗಳು ಹೆದರಿದ್ದಾರೆ. ಅದನ್ನು ಮುಚ್ಚಿಡಲು ಬೇರೆಯವರನ್ನು ಹೆದರಿಸುತ್ತಿದ್ದಾರೆ. ನೀವು ಭಯ ಆಯ್ಕೆ ಮಾಡಿಕೊಳ್ಳಬೇಡಿ, ನಾನಂತೂ ಭಯ ಬೀಳದೆ ಈ ಹೇಡಿಗಳನ್ನು ನಿರಂತರ ಎದುರಿಸುತ್ತೇನೆ ಎಂದು ಮಲಪ್ಪುರಂನಲ್ಲಿ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದರು.
ನಿಮಗೆ ನೀವೇ ಮಾದರಿ. ಭಯವನ್ನು ಆಯ್ಕೆ ಮಾಡಿಕೊಂಡರೆ ದೇಶ ಉಳಿಯದು. ಚುನಾವಣಾ ಫಲಿತಾಂಶ ರಾಜಕೀಯದಲ್ಲಿ ಇದ್ದೇ ಇರುತ್ತದೆ. ಅದಕ್ಕಾಗಿ ಹೇಡಿ ಸರಕಾರದ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ; ನಿಲ್ಲಿಸಕೂಡದು ಎಂದು ಅವರು ಹೇಳಿದರು.