ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ದೇಶಕ್ಕೆ ಕಂಟಕ ಪ್ರಾಯರಾದ ಉಗ್ರರನ್ನು ಹೆಡೆಮರಿ ಕಟ್ಟಿ ಸೇಡು ತೀರಿಸಿಕೊಂಡ ಭಾರತೀಯ ಸೇನೆಯ ಅತ್ಯಪೂರ್ವ ಶೌರ್ಯ ಪರಾಕ್ರವನ್ನು ಮಂಗಳೂರಿನಲ್ಲಿ ಸಿಂಧೂರ ವಿಜಯೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಂದಾಳುಗಳು, ಶಾಸಕರು, ಸಂಸದರು ಭಾಗವಹಿಸಿದರು. ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಭಾರತೀಯ ಸೇನೆಯ ಶೌರ್ಯ ಪರಾಕ್ರಮವನ್ನು ಹಾದಿಯುವುದಕ್ಕೂ ಕೊಂಡಾಡಲಾಯಿತು. ಸಾರ್ವಜನಿಕರು ಕೂಡ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆಯನ್ನು ಕೊಟ್ಟು ಸೈನಿಕರ ಪರಾಕ್ರಮವನ್ನು ಕೊಂಡಾಡಿದರು.