ಫೋಟೋ ವರದಿ :ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ  ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಜನ ಪ್ರತಿನಿಧಿಗಳ ಸಮಾವೇಶ ಅಕ್ಟೋಬರ್ 19ರಂದು ಮೂಡುಬಿದಿರೆ, ಕಾಮಧೇನು ಸಭಾಭವನದಲ್ಲಿ ನಡೆಯಿತು. ಸಮಾವೇಶದ ಉದ್ಘಾಟನೆಯಲ್ಲಿ ದೀಪ ಬೆಳಗಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ರಾಜಕೀಯದಲ್ಲಿ ಧೈರ್ಯ ಹೆಮ್ಮೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಹಿಂದಿನ ಸರಕಾರದಲ್ಲಿ ಲಕ್ಷಗಟ್ಟಲೆ ಅನುದಾನ ಗ್ರಾಮ ಪಂಚಾಯಿತಿಗಳಿಗೆ ದೊರಕುತ್ತಿತ್ತು ಆದರೆ ಕಳೆದ ಒಂದುವರೆ ವರ್ಷದಿಂದ ಒಂದು ಪೈಸೆಯೂ ಅನುದಾನ ದೊರಕುತ್ತಿಲ್ಲ. ಮಾತ್ರವಲ್ಲ ಸಾಮಾನ್ಯ ಜನರ ಮನೆ ರಿಪೇರಿಗೆ ನಿಗದಿಗೊಳಿಸಿದ ಅನುದಾನದ ಹಣವನ್ನೇ ಸರಕಾರ ಹಿಂದಕ್ಕೆ ಪಡೆದಿದೆ. ಮಾಡಿದ ಕೆಲಸದ ಬಿಲ್ಲನ್ನೂ ಸಂದಾಯ ಮಾಡದೆ ತಡೆಹಿಡಿದಿದೆ ಎಂದು ಅಲವತ್ತುಕೊಂಡಿದ್ದಾರೆ. ಈ ರೀತಿಯ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಸಾಧ್ಯವಾಗುವುದು ಹೇಗೆ ಎಂದು ಪಂಚಾಯತ್ ಕಾರ್ಯಕರ್ತರಲ್ಲಿ ಪ್ರಶ್ನಿಸಿ ಬಿಜೆಪಿಯ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಪ್ರಚಂಡ ಬಹುಮತದಿಂದ ಆರಿಸುವಂತೆ ಕೇಳಿಕೊಂಡರು. 

ಸಭೆಯನ್ನುದೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಿಂದುತ್ವಕ್ಕಾಗಿ, ಯುವ ಕಾರ್ಯಕರ್ತರಾಗಿ ಕೆಲಸ ಮಾಡಿದ ಕಿಶೋರ್ ಅಂತಹ ವ್ಯಕ್ತಿಗಳು ಗೆದ್ದು ಬರಬೇಕು ಎಂದು ಆಶಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಪ್ರತಿಯೊಂದುಕ್ಕೂ ಪಂಚಾಯತ್ ಮೆಂಬರ್ ಗಳೇ ಅಗತ್ಯ ಇರುವುದರಿಂದ ಕೇಂದ್ರ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ನೇರ ಅನುದಾನ ನೀಡುವ ಮೂಲಕ ಗ್ರಾಮ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಆದುದರಿಂದ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಆಯ್ಕೆ ಆಗುವಂತೆ ಪ್ರಯತ್ನಿಸಬೇಕೆಂದು ಕೇಳಿಕೊಂಡರು. 

ಜಿಲ್ಲಾ ಪರಿಷತ್ ಅಭ್ಯರ್ಥಿ ಕಿಶನ್ ಕುಮಾರ್ ಪುತ್ತೂರು ಮಾತನಾಡಿ ಜಲಜೀವನ್, ಸ್ವಚ್ಛ ಭಾರತ್, ಜನಧನ್, ಮಾತೃವಂದನ, ಇತ್ಯಾದಿ ಜನೋಪಯೋಗಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವ ಪಕ್ಷವನ್ನು ಬೆಂಬಲಿಸಲು ಕೇಳಿಕೊಂಡರು. 

ವೋಟು ನೀಡುವ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಮನೆವರಿಕೆ ಮಾಡಿಕೊಡಲಾಯಿತು. ಮತ ಅಸಿಂಧು ಆಗದಂತೆ ಜಾಗ್ರತೆ ವಹಿಸಲು ಕೇಳಿಕೊಳ್ಳಲಾಯಿತು. 

ವೇದಿಕೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಮಂಡಲ ಪ್ರಭಾರ ಜಯಂತ್ ಕೋಟ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಗದೀಶ್ ಆಳ್ವ, ಚುನಾವಣಾ ಮೇಲ್ವಿಚಾರಕ ರಾಕೇಶ್ ರೈ, ಉಪಾಧ್ಯಕ್ಷ ಸುನಿಲ್ ಆಳುವ, ಶಾಂತಿಪ್ರಸಾದ್ ಹೆಗಡೆ, ಪುರಸಭಾ ಅಧ್ಯಕ್ಷ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಚುನಾವಣಾ ಉಸ್ತುವಾರಿ ಹರೀಶ್ ಮೂಡುಶೆಡ್ಡೆ, ರಂಜಿತ್ ಪೂಜಾರಿ,  ಇತ್ಯಾದಿಯರು ಉಪಸ್ಥಿತರಿದ್ದರು. ರಾಜೀವ್ ಶೆಟ್ಟಿ ವಂದೇ ಮಾತರಂ ಹಾಡಿದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರ್ವಹಿಸಿದರು. ಮಂಡಲ ಕಾರ್ಯದರ್ಶಿ ಹರಿಪ್ರಸಾದ್ ಧನ್ಯವಾದ ಸಲ್ಲಿಸಿದರು.