ಮಂಗಳೂರು: ಪಾವೂರು ಉಳಿಯ,ಪ್ರದೇಶಗಳಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದನ್ನು ಸಂಪೂರ್ಣವಾಗಿ ನಿಷೇಧಿಸಿದಕ್ಕಾಗಿ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರಿಗೆ ಕಥೊಲಿಕ್ ಸಭಾ ಸಂಘಟನೆಯಿಂದ ಸಮಸ್ತ ದ್ವೀಪ ನಿವಾಸಿಗಳ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

ಮಂಗಳೂರು ತಾಲೂಕು ಗ್ರಾಮದ ಪಾವೂರು ಉಳಿಯ ಎಂಬಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು ಈ ನದಿ ತೀರದಲ್ಲಿ ದ್ವೀಪವಿದ್ದು, ಈ ದ್ವೀಪದ ಸುತ್ತ ಪ್ರದೇಶವು ನದಿಯು ಹರಿಯುತ್ತಿದ್ದು, ಈ ದ್ವೀಪದಲ್ಲಿ 58 ಮನೆಗಳು ಹಾಗೂ ಕ್ರೈಸ್ತ ದೇವಾಲಯ ಇರುತ್ತದೆ. ಈ ದ್ವೀಪ ಪ್ರದೇಶದ ನಿವಾಸಿಗಳು ಪೇಟೆಗೆ ಹಾಗೂ ದಿನ ನಿತ್ಯ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು, ಗರ್ಭಿಣಿಯರನ್ನು ಮತ್ತು ರೋಗಿಗಳನ್ನು ಆಸ್ಪತ್ರೆಗೆ ಕೊಂಡುಹೋಗಲು ತಾವೂ ಸರಕಾರದಿಂದ ಒದಗಿಸಿದ ದೋಣಿಯನ್ನೇ ಅವಲಂಬಿಸಬೇಕಾಗಿರುತ್ತದೆ, ರಾತ್ರಿ ಹೊತ್ತಲ್ಲಿ ಈ ನದಿಯಲ್ಲಿ ಸಂಚಾರಿಸುವುದು ಅತೀವ ಕಷ್ಟಕರವಾಗಿರುತ್ತದೆ. ತಾವೂ ಪ್ರತಿನಿಧಿಸುತ್ತಿರುವ ಕ್ಷೇತ್ರ ಇದಾಗಿದ್ದು ನಮ್ಮ ಬೇಡಿಕೆಗಳಿಗೆ ಹಾಗೂ ಕಷ್ಟಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿರವ ತಾವೂ ಬಡವರಾದ ದ್ವೀಪ ನಿವಾಸಿಗಳ ಮೇಲೆ ದಯೆ ತೋರಿ ಪಾವೂರು ಉಳಿಯ ದ್ವೀಪಕ್ಕೆ ಒಂದು ತೂಗು ಸೇತುವೆ ಯನ್ನು ನಿರ್ಮಿಸಿ ಕೊಟ್ಟು ನಿವಾಸಿಗಳ ಅಗತ್ಯತೆಗಳಿಗೆ ಸ್ಪಂದಿಸಬೇಕಾಗಿ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರಿಗೆ ಕಥೊಲಿಕ್ ಸಭಾ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಸಮಸ್ಯೆಯನ್ನು ಆಲಿಸಿ ಅಲ್ಲಿಯ ನಿವಾಸಿಗಳಿಗೆ ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ನೀಡಿದರು. ಪಾವೂರು ಉಳಿಯ ಪ್ರದೇಶಕ್ಕೆ ಅತೀ ಶೀಘ್ರದಲ್ಲಿ ತೂಗು ಸೇತುವೆಯನ್ನು ನಿರ್ಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಅಧ್ಯಕ್ಷರಾದ  ಆಲ್ವಿನ್ ಡಿಸೋಜ ಮಾಜಿ ಅಧ್ಯಕ್ಷರಾದ  ಪಾವ್ಲ್ ರೋಲ್ಪಿ ಡಿಕೊಸ್ತಾ, ಉಪಾಧ್ಯಕ್ಷರಾದ ಸ್ಟೀವನ್ ರೊಡ್ರಿಗಸ್ ಮಾಜಿ ಅಧ್ಯಕ್ಷರು, ವಲಯ ಅಧ್ಯಕ್ಷರು,  ಹಾಗೂ ಪ್ರಮುಖರು ಉಪಸ್ಥಿತರಿದ್ದರು