ಮಂಗಳೂರು, ನ 10: ಸುರತ್ಕಲ್ ನ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ತಾಂತ್ರಿಕ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಸ್ಥಳೀಯ ಪ್ರೌಢ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಜ್ವಲ ಭವಿಷ್ಯಕ್ಕಾಗಿ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು.
ಎ.ಸಿ.ಎಮ್ ವಿಭಾಗದ ವತಿಯಿಂದ ಸಂಯೋಜಕಿ ಶಾರದಾ ಪಂಡಿತರಿಂದ ಉದ್ಘಾಟಿಸಲ್ಪಟ್ಟ ಈ ಕಾರ್ಯಾಗಾರವು ಮಂಗಳೂರಿನ ಮಂಗಳಾ ಆಸ್ಪತ್ರೆಯ ಶಸ್ತ್ರ ವೈದ್ಯ, ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡುವ ಮೂಲಕ ಚಾಲನೆ ಗೊಂಡಿತು.
ಅವರು ಮಾತನಾಡುತ್ತಾ ಇತರರ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಮುಂದುವರಿದರೆ ತನ್ನ ಅಳತೆಗೆ ತಕ್ಕ ಫಲ ಇಗಲಾರದು. ಹಲವು ರೀತಿಯ ವಿಧಿ ವಿಧಾನಗಳ ಮೂಲಕ ತನ್ನ ಉದ್ದೇಶದ ನಿರ್ಣಯ ಮಾಡಲು ಯತ್ನಿಸಿದಾಗ ಉತ್ತಮ ಭವಿಷ್ಯ ಸಾಧ್ಯ. ಇದಕ್ಕಾಗಿ ಶ್ರದ್ಧೆ ಹಾಗೂ ತನ್ಮಯತೆ ಅತ್ಯಗತ್ಯ ಹಾಗೂ ಆದುನಿಕ ತಂತ್ರಜ್ಞಾನಗಳ ಮೂಲಕ ಯೋಗ್ಯ ಹಾದಿಯ ನಿರ್ಧಾರ ಸಾಧ್ಯ ಎಂದರು.
ಆಕಾಶ ಗೌಡ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಸಂಯೋಜಕ ತಂಡದ ಸಮಿತ್ ವಿಜಾಪುರ್, ಅನಿರುದ್ಧ ಗುಬ್ಬಿ, ಕಿರಣ ಸೀತಾರಾಮ್,ಹಾಗೂ ಪವರ್ ಪಾಯಿಂಟ್ ನಲ್ಲಿ ಸಹಕರಿಸಿದ ಇನೊಳಿಯ ಶಮಾ ಪರವೀನ್ ಉಪಸ್ಥಿತರಿದ್ದರು.
ಸುಮಾರು ಎಂಭತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದರು.