ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ನಡೆದ "ಗದ್ದಿಗೆ" ಕರಾವಳಿ ಮರಾಟಿ ಸಮಾವೇಶ -2024 ನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ, ಸಂವಿಧಾನದ ಆಶಯಗಳಿಗೆ ಪೂರಕವಾಗಿ ಸರ್ಕಾರದ ನಿಲುವುಗಳಿವೆ. ಸುಮಾರು 60 ಕೋಟಿಯನ್ನು ಕೌಶಲ್ಯ ತರಬೇತಿಗಾಗಿ ತೆಗೆದಿರಿಸಿದೆ. ಯುವಕರು ಶೈಕ್ಷಣಿಕ ಅಭಿವೃದ್ಧಿ ಹೊಂದಿ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರೌಢಿಮೆಯನ್ನು ತೋರಿಸಬೇಕು ಎಂದು ಈ ಮಹಾನ್ ಕಾರ್ಯಕ್ರಮವನ್ನು ಮೆಚ್ಚಿಕೊಂಡರು.

ಮರಾಟಿಗರ 2 ನೇ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಜಮ್ಮು-ಕಾಶ್ಮೀರ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಮಾವೇಶದ ಅಧ್ಯಕ್ಷ ಹೆಚ್.ರಾಜೇಶ್ ಪ್ರಸಾದ್ ಮಾತನಾಡಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಗುರುತಿಸಿಕೊಳ್ಳಲು ಶೈಕ್ಷಣಿಕ ಪ್ರೌಢಿಮೆ ಹೊಂದಲು ಕೇಳಿಕೊಂಡರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಉದ್ಯಮಿ -ದಾನಿ ಶಶಿಧರ ಶೆಟ್ಟಿ ಬರೋಡಾ, ಕೃಷಿ ವಿಭಾಗದ ನಿವೃತ್ತ ನಿರ್ದೇಶಕ ಡಾ.ಬಿ.ಜಿ.ನಾಯ್ಕ್, ಮುಖ್ಯ ವಿಜ್ಞಾನಿ ಶೋಭಾವತಿ ಎಂ.ಟಿ., ದ.ಕ.ಜಿಲ್ಲಾ ಮರಾಟಿ ಸಂಘದ ಅಧ್ಯಕ್ಷ ಎನ್.ವಿಶ್ವನಾಥ್ ನಾಯ್ಕ್, ಮರಾಟಿ ಸಂರಕ್ಷಣೆ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ್ ಕೆದಿಲ, ಉಡುಪಿ ಜಿಲ್ಲೆಯ ಅಧ್ಯಕ್ಷ ಚೇರ್ಕಾಡಿ ಉಮೇಶ್ ನಾಯ್ಕ, ಶಿವಮೊಗ್ಗದ ರಾಮಚಂದ್ರ, ನಿಕಟ ಪೂರ್ವ ಅಧ್ಯಕ್ಷ ರವಿಪ್ರಸಾದ್ ನಾಯ್ಕ್, ಸಂಚಾಲಕ ಬಾಲಕೃಷ್ಣ ಸಿ.ಹೆಚ್., ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ಕೋಶಾಧಿಕಾರಿ ನರಸಿಂಹ ನಾಯ್ಕ್ ಹಾಜರಿದ್ದರು.

ಸಮಾವೇಶದ ಉದ್ಘಾಟನೆಯಲ್ಲಿ ಗೌರವಾಧ್ಯಕ್ಷ ಡಾ.ಕೆ.ಸುಂದರ್ ನಾಯ್ಕ್ ಸ್ವಾಗತಿಸಿ ಮನವಿ ಮಂಡಿಸಿದರು. ಸಹ ಸಂಚಾಲಕ ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ನಾಯ್ಕ್ ವಂದಿಸಿದರು.