ಮೂಡಬಿದ್ರೆ: ಚೋಳ ಶೆಟ್ಟಿ ಬಸದಿ ಯಲ್ಲಿ ಬ್ರಹ್ಮಯಕ್ಷ, ಪದ್ಮಾವತಿ ಯಕ್ಷಿ ಪ್ರತಿಷ್ಠಾಪನೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಪಾವನ ಸಾನ್ನಿಧ್ಯ ಮಾರ್ಗದರ್ಶನ ದಲ್ಲಿ ದಿನಾಂಕ 19.06.2022 ರಂದು ಬೆಳಿಗ್ಗೆ 7ರಿಂದ ಸಂಜೆ ಗಂಟೆ 6.30ರ ವರೆಗೆ ಅತ್ಯಂತ ಶ್ರದ್ದಾ ಭಕ್ತಿಯಿಂದ ಜಿನ ಆಗಮೋಕ್ತ ವಿಧಿ ಯನ್ವಯಚೋಳ ಶೆಟ್ಟಿ ಬಸದಿ ಯಲ್ಲಿ ಜರುಗಿತು 12.30 ಕ್ಕೆ ಬ್ರಹ್ಮ ಯಕ್ಷ ಸಂಜೆ 5.35ಕ್ಕೆ ಮಾತೆ ಪದ್ಮಾವತಿ ದೇವಿ ಆರಾಧನೆ ಹಾಗೂ ಯಕ್ಷಿ ಪ್ರತಿಷ್ಠೆ ಯನ್ನು ಭಟ್ಟಾರಕ ಸ್ವಾಮೀಜಿ ನೆರವೇರಿಸಿದರು ಬಸದಿ ಸುಮಾರು 800 ವರ್ಷ ಪ್ರಾಚೀನ ವಾಗಿದ್ದು ಇಲ್ಲಿ ಯ ಬಸದಿ ಯಲ್ಲಿ ಶ್ರೀ ಮಠ ದ ರಮರಾಣಿ ಶೋದ ಸಂಸ್ಥಾನ ದಲ್ಲಿರುವ 50 ತಾಮ್ರ ಶಾಶನ ಗಳಲ್ಲಿ ಹೆಚ್ಚಿನ ಶಾಶನ ಇದೇ ಚೋಳ ಶೆಟ್ಟಿ ಬಸದಿಯ ನಮಸ್ಕಾರ ಮಂಟಪದ ಅಂತರಾಳದಲ್ಲಿ ಬಹು ಹಿಂದೆ ಸಿಕ್ಕಿತ್ತು 1996 ರಲ್ಲಿ ಜೀರ್ಣೋದ್ದಾರ ಗೊಂಡಿದ್ದು ಆ ನಂತರ ಮೂಡು ಬಿದಿರೆ ಶ್ರೀ ಗಳ ಮಾರ್ಗದರ್ಶನ ದಲ್ಲಿ ಮುಳಿ ಬೆಟ್ಟು ಮನೆತನ ದವರು ದಾನ ವಾಗಿ ನೂತನ ಬ್ರಹ್ಮ ಯಕ್ಷ, ಮಾತೆ ಪದ್ಮಾವತಿ ಬಿಂಬ ಪ್ರತಿಷ್ಠೆ ನೆರವೇರಿಸಿದರು.
ಇದೇ ಸಂಧರ್ಭ ಮಧ್ಯಾಹ್ನ ಧಾರ್ಮಿಕ ಸಭೆ ಯಲ್ಲಿ ಆಶೀರ್ವಾದ ನೀಡಿದ ಮೂಡು ಬಿದಿರೆ ಶ್ರೀ ಶ್ರೀ ಗಳು ಹಿಂದಿನ ಜನರ ಸಮರ್ಪಣೆ ತ್ಯಾಗ ನಿಸ್ವಾರ್ಥ ಸೇವೆ ಯನ್ನು ಸಲ್ಲಿಸಿ ವಿಶಾಲ ಬಸದಿ ರಚಿಸಿ ಆದರ್ಶ ರಾಗಿದ್ದಾರೆ ಇತಿಹಾಸ ಕ್ಕೆ ಬಹು ದೊಡ್ಡ ಕಾಣಿಕೆ ನೀಡಿದ ಬಸದಿ ಇಲ್ಲಿಯ ಪದ್ಮ ಪ್ರಭ ಸ್ವಾಮಿ ಸುಪಾರ್ಶ್ವ ನಾಥ ಸ್ವಾಮಿ ಸ್ಥಾಪಿಸ ಲ್ಪಟ್ಟು ಅನೇಕ ಶತ ಮಾ ನ ಗಳೇ ಕಳೆದಿವೆ ಇದೀಗ ಮುಲಿಬೆಟ್ಟು ಕುಟುಂಬ ಸ್ಥರು ಬಸದಿ ಜೀರ್ಣೋದ್ದಾರಕ್ಕೆ ಸಂಪೂರ್ಣ ಸಹಕಾರ ಮಾಡಿರುತ್ತಾರೆ.
ದಾನ ನೀಡಿದ ಸರ್ವರಿಗೂ ಶ್ರೀ ಫಲ ಮಂತ್ರಾಕ್ಷತೆ ನೀಡಿ ಶುಭಾ ಶೀರ್ವಾದ ಮಾಡಿದರು ನಂತರ ಯಂ ವಿ ಶೆಟ್ಟಿ ರಚಿತ ಲೇಖನ ಸಹಿತ 2ನೇ ಅವ್ರತ್ತಿ ಪದ್ಮಪ್ರಭಾ ಸ್ವಾಮಿ ಚರಿತ್ರೆ, ಶ್ರೀಮತಿ ಮೋಹಿನಿ ವಿಮಲಕುಮಾರ್ ಷೋಡಶ ಭಾವನೆ ಪೂಜಾ ಅಷ್ಟಕ ಪುಸ್ತಕ ಸ್ವಾಮೀಜಿ ಬಿಡುಗಡೆ ಮಾಡಿದರು ಈ ಸಂಧರ್ಭ ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಕುಮಾರ್ ಆದರ್ಶ್ ಸಂಶೋದ ಕ ಲೇಖಕ ರಾದ ಎಸ್ ಡಿ ಶೆಟ್ಟಿ, ಸುಗುಣ ಶೆಟ್ಟಿ, ಭೋಜರಾಜ್,ಅರಮನೆ ಕುಲ ದೀಪ ಜೀವoದರ್ ಡಾ ಪ್ರಭ ಚಂದ್ರ, ಕಿರಣ್ ಸುಬೋದ್ ಬಲ್ಲಾಳ್, ಬಾಹುಬಲಿ ಪ್ರಸಾದ್, ಅಭಯ ಚಂದ್ರ ಜೈನ್ ಮೊದಲಾದ ವರು ಉಪಸ್ಥಿತರಿದ್ದರು ಶ್ರೀಮತಿ ನೀರಿಕ್ಷಾ ಎಸ್ ಜೈನ್ ಭಕ್ತಿ ಗಾನ ಕಾರ್ಯಕ್ರಮ ನಡೆಸಿ ಕೊಟ್ಟರು.
ಪ್ರತಿಷ್ಠಾ ಪುರೋಹಿತ ನಾಗೇಂದ್ರ ಇಂದ್ರ ಬಳಗ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮ ನೆರವೇರಿಸಿ ಕೊಟ್ಟರು ಫೋಟೋ ವಿಡಿಯೋ ಉಚಿತ ವಾಗಿ ಮಾಡಿದ ನೇರoಕಿ ಪಾರ್ಶ್ವ ನಾಥ ರನ್ನು ವಿವಿಧ ಸೇವಾ ದಾನಿ ಗಳನ್ನು ಪೂಜಾ ಸೇವಾ ದಾತಾರರ ಪರವಾಗಿ ಸ್ವಾಮಿ ಜೀ ಶಾಲು ಸ್ಮರಣಿಕೆ ನೀಡಿ ಹರಸಿದರು ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.