ಸಾವೋಪಾವ್ಲೋದಲ್ಲಿರುವ ಶತಾಯುಷಿ ಅಲೆಸ್ಟೆ ಅರಾಂತೆಸ್ ಅವರು ತಮ್ಮ ಮಗ ಪೀಲೆಯವರನ್ನು ಕಳೆದುಕೊಂಡರೆ ಅದಾದ 3 ಗಂಟೆಯ ಬಳಿಕ 13,848 ಕಿಲೋಮೀಟರ್ ದೂರದ ಅಹಮದಾಬಾದಿನಲ್ಲಿ ಹೀರಾಬೆನ್ ತನ್ನ ಮಗ ಪ್ರಧಾನಿ ಮೋದಿಯವರನ್ನು ಅಗಲಿದರು.

ಸೆಲೆಸ್ಟೆ ಅರಾಂತೆಸ್ ಮತ್ತು ಹೀರಾಬೆನ್ ಇಬ್ಬರೂ ಗೃಹಿಣಿಯರು. ಗುರುವಾರ ಮಧ್ಯ ರಾತ್ರಿ ಪೀಲೆ ಸಾವು ಕಂಡರೆ, ಶುಕ್ರವಾರ ಮುಂಜಾವ ಮೂರೂವರೆ ಗಂಟೆಗೆ ಹೀರಾಬೆನ್ ಕೊನೆಯುಸಿರೆಳೆದರು.

ಪೀಲೆಯೆಂದೇ ಜಗತ್ತು ಅರಿತಿರುವ ಕಾಲ್ಚೆಂಡು ವೀರನ ಹುಟ್ಟು ಹೆಸರು ಎಡ್ಸನ್ ಅರಾಂತೆಸ್ ಡೊ ನೇಸಿಮೆಂಟೊ. ಫಿಫಾ ‌ಪ್ರಕಾರ ಅವರು ಗ್ರೇಟೆಸ್ಟ್. 1977ರಲ್ಲಿ‌ ಪೀಲೆಯವರ ತಂಡವು ಲೋಕ ಪ್ರವಾಸದ ವೇಳೆ ಕೊಲ್ಕತ್ತಾಕ್ಕೆ ಬಂದು ಸ್ಥಳೀಯ ಮೋಹನ್ ಬಾಗನ್ ವಿರುದ್ಧ ಪಂದ್ಯವಾಡಿತ್ತು.