ಹಲವಾರು ಸುದ್ದಿ ವಾಹಿನಿಗಳು ಕೋಮು ಸೌಹಾರ್ದದ ವಿಷಯದಲ್ಲಿ ಹೊಣೆಗೇಡಿತನದಿಂದ ವರ್ತಿಸಿರುವುದರ ಬಗೆಗೆ ಭಾರತೀಯ ಸಂಪಾದಕರ ಕೂಟವು ಬೇಸರ ವ್ಯಕ್ತಪಡಿಸಿದೆ.

ಪ್ರವಾದಿ ಮುಹಮ್ಮದ್‌ರ ವಿಷಯ ಮತ್ತಿತರ ಸಂದರ್ಭಗಳಲ್ಲಿ ವಾಹಿನಿಗಳು ಜವಾಬ್ದಾರಿಯಿಂದ ವರ್ತಿಸಿಲ್ಲ. ನಿಮ್ಮ ಆತ್ಮಸಾಕ್ಷಿಯನ್ನು ನೀವು ಪ್ರಶ್ನಿಸಿಕೊಳ್ಳಿ ಎಂದು ಭಾರತೀಯ ಸಂಪಾದಕರ ಕೂಟವು ಅಸಮಾಧಾನ ವ್ಯಕ್ತಪಡಿಸಿದೆ.