ಮಹದೇಶ್ವರ ಬೆಟ್ಟದ ಕ್ಷೇತ್ರಾಭಿವೃದ್ಧಿ ಮಂಡಳಿಯು ಅಂತರಗಂಗೆ ಬಳಿ ನಿರ್ಮಿಸಿದ್ದ ಮಳಿಗೆಗಳಲ್ಲಿ ಬೆಂಕಿ ಅನಾಹುತ ನಡೆದು ಲಕ್ಷಾಂತರ ಬೆಲೆಯ ವಸ್ತುಗಳು ಬೆಂಕಿಗೆ ಆಹಾರವಾದವು.

ಈ ಮಳಿಗೆಗಳ ಹಿಂದೆ ಕಸದ ರಾಶಿ ಇದ್ದು, ಅಲ್ಲಿಂದ ಬೆಂಕಿಯು ಮಳಿಗೆಗಳಿಗೆ ಹರಡಿದೆ ಎನ್ನಲಾಗಿದೆ. ಹಲವು ಮಳಿಗೆಗಳಿಗೆ ಹಾನಿಯಾಗಿವೆ. ಹನುಮಂತು ಎಂಬವರು ವಹಿಸಿಕೊಂಡಿದ್ದ ಮೂರು ಮಳಿಗೆಗಳು ಸಂಪೂರ್ಣ ಭಸ್ಮವಾಗಿವೆ.