ಧರ್ಮಸ್ಥಳ ,ಡಿ.20: ದಕ್ಷಿಣ ಕನ್ನಡ ಪತ್ರಕರ್ತರ ಸಮ್ಮೇಳನ ಮಾದರಿ ಯಶಸ್ವಿ ಸಮ್ಮೇಳನ ವಾಗಿ ಮೂಡಿ ಬರಲಿ ಎಂದು ಶ್ರೀ ಧರ್ಮ‌ಸ್ಥಳ ಕ್ಷೇತ್ರದ  ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ‌ಹೆಗ್ಗಡೆ ತಿಳಿಸಿದ್ದಾರೆ.

ಮಂಗಳೂರಿನ ಕುದ್ಮುಲ್ ರಂಗ ರಾವ್ ಸಭಾಂಗಣದಲ್ಲಿ ಡಿ.28 ರಂದು ನಡೆಯಲಿರು ವ ದಕ್ಷಿಣ ಕನ್ನಡ ಕಾರ್ಯ ನಿರತ ಸಂಘದ ಜಿಲ್ಲಾ ಸಮಾವೇಶ ದ ಲಾಂಛನ ವನ್ನು ‌ಸೋಮವಾರ ಶ್ರೀ ಧರ್ಮ‌ಸ್ಥಳ ಕ್ಷೇತ್ರದ  ಶ್ರೀ ಕ್ಷೇತ್ರದಲ್ಲಿಂದು ಬಿಡುಗಡೆಗೊಳಿ‌ಸಿ ಮಾತನಾಡಿದರು.

ದ.ಕ ಜಿಲ್ಲಾ ಕಾರ್ಯ ನಿರತ ಷತ್ರಕರ್ತರ ಸಂಘ ಕ್ರೀಯಾಶೀಲ ಚಟುವಟಿಕೆ ಗಳಲ್ಲಿ ತೊಡಗಿರುವುದನ್ನು ಗಮನಿಸಿದ್ದೇನೆ. ಕಳೆದ ಬಾರಿ ಮಾದರಿ ಯಾದ ರಾಜ್ಯ ‌ಸಮ್ಮೇಳನ ದಲ್ಲಿ ಪತ್ರಕರ್ತರು ಉತ್ಸಾಹ ದಿಂದ ಭಾಗ ವಹಿಸಿರುವುದನ್ನ ಗಮನಿ‌ಸಿದ್ದೇನೆ.ಈ ಬಾರಿ ಯೂ ಸಮ್ಮೇಳನ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ಸಂಘದ ಪದಾಧಿಕಾರಿಗಳಾದ ಇಬ್ರಾಹಿಂ ಅಡ್ಕ ಸ್ಥಳ,ಪುಷ್ಪ ರಾಜ್ ಬಿ.ಎನ್,ಭಾಸ್ಕರ್ ರೈ ಕಟ್ಟ,ರಾಜೇಶ್ ದಡ್ಡಂಗಡಿ ,ಬೆಳ್ತಂಗಡಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮನೋಹರ ಬಳಂಜ,ಎನ್.ಆರ್.ಪೂವಣಿ ಉಪಸ್ಥಿತರಿದ್ದರು‌.

ಬೆಳ್ತಂಗಡಿ ವಿಧಾನ ‌ಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಹಿತಿ ಪತ್ರವನ್ನು ಇಂದು ಬೆಳ್ತಂಗಡಿ ಯಲ್ಲಿಂದು ಬಿಡುಗಡೆ ಗೊಳಿಸಿ  ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಪತ್ರಕರ್ತ ರ ಸಂಘದ ಅಧ್ಯಕ್ಷ  ಶ್ರೀ ನಿವಾಸ ನಾಯಕ್ ಇಂದಾಜೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಚ್ಚುಶ್ರೀ ಬಂಗೇರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.