ಬೋಂದೆಲ್ ಸ್ಟೇಟ್ ಬ್ಯಾಂಕ್ ನಡುವೆ ಚಲಿಸುವ 19ನೇ ನಂಬರ್ ಬಸ್ಸಿನ ಕಂಡಕ್ಟರ್ 8ನೇ ತರಗತಿಯ ವಿದ್ಯಾರ್ಥಿನಿಗೆ ಬಸ್ ಟಿಕೆಟ್ ಜೊತೆ ಫೋನ್ ನಂಬರ್ ನೀಡಿದ ಸಂಬಂಧ ಮಂಗಳೂರು ಮಹಿಳಾ ಪೋಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ 21ರ ಮಂಜುನಾಥ ಬಂಧಿತ. ಈತ ಹಿಂದೆಯೂ ಹುಡುಗಿಯರ ಜೊತೆ ಕೆಟ್ಟದಾಗಿ ನಡೆದುಕೊಂಡಿರುವುದು ತನಿಖೆಯಿಂದ ತಿಳಿದು ಬಂದಿದೆ.

ನಾಲ್ಕು ದಿನದ ಹಿಂದೆ ಪ್ರಕರಣ ನಡೆದಿದ್ದು, ಬಸ್ ತಡೆದು ಸಂಬಂಧಿಕರು ಮಂಜುನಾಥನಿಗೆ ಬಯ್ದದ್ದು, ಹುಡುಗಿಯ ತಾಯಿ ಹೊಡೆದ ವೀಡಿಯೋ ವೈರಲ್ ಆಗಿತ್ತು.