ಮಂಗಳೂರು, ಜು 26: ಇಂದು ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಮಂಗಳೂರು ನಗರದ ಕದ್ರಿಯಲ್ಲಿರುವ  ವೀರ ಯೋಧರ ಸ್ಮಾರಕ್ಕಕ್ಕೆ ಕಾಂಗ್ರೆಸ್ ಮುಖಂಡರಾದ ಮಂಜುಳಾ ನಾಯಕ್ ರವರು ತೆರಳಿ ವೀರ ಯೋದರಿಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿದರು.

ಒಂದು ಕಡೆ ಯುದ್ಧದಲ್ಲಿ ಗೆದ್ದೇವು ಅನ್ನುವ ಖುಷಿ ತಂದರೆ ಇನ್ನೊಂದು ಕಡೆ 537 ವೀರ ಯೋಧರನ್ನು ಕಳೆದುಕೊಂಡೆವು ಅನ್ನುವ ದುಃಖ ಆದರೂ ನಾವು ಈ ವಿಜಯೋತ್ಸವವನ್ನು ಆಚರಿಸುವ ಅವಶ್ಯಕತೆ ಇದೆ .ಇದು ನಾವು ಅವರಿಗೆ ಸಲ್ಲಿಸುವ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗೌರವ ಅದಲ್ಲದೆ ನಮ್ಮ ಸೈನಿಕರ ಮನೋಬಲ ಹೆಚ್ಚಿಸಲಿದೆ ಮತ್ತು ಯುವ ಪೀಳಿಗೆಗೆ ದೇಶ ಪ್ರೇಮ ಹೆಚ್ಚಿಸಲು ಜಾಗೃತಿ ಮೂಡಿಸಲು ನಾವು ಆಚರಸಲೆಬೇಕು ಎಂದು ಮಂಜುಳಾ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಯೋಗೀಶ್ ನಾಯಕ್ ,ಮಾಲಿನಿ ನಾಯಕ್, ಸಮರ್ಥ ಭಟ್, ರಾಜಹುಲಿ ಮಲ್ಲಿಕಾಜುರ್ನ್ ಹಾಗೂ ವರುಣ್ ನಾಯಕ್ ಉಪಸ್ಥಿತರಿದ್ದರು.