ಎಐಸಿಸಿ ನಾಯಕರ ಪ್ರತಿಭಟನೆ ಹತ್ತಿಕ್ಕಲು ಕೇಂದ್ರದ ಬಿಜೆಪಿ ಸರಕಾರವು ಇಡಿ-ಜಾರಿ ನಿರ್ದೇಶನಾಲಯ ಮತ್ತು ದಿಲ್ಲಿ ಪೋಲೀಸರನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರಿಗೆ ಮಾನಸಿಕ ಹಿಂಸೆ ನೀಡುತ್ತಿರುವುದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನವರು ಫಳ್ನೀರ್ ಮಥಾಯಸ್ ಉದ್ಯಾನದಿಂದ ಅತ್ತಾವರದ ಐಟಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಾಜೀ ಮಂತ್ರಿ ರಮಾನಾಥ ರೈ, ಮಾಜೀ ಶಾಸಕರಾದ ಜೆ. ಆರ್. ಲೋಬೋ, ಐವಾನ್ ಡಿಸೋಜಾ, ಮಾಜೀ ಮೇಯರ್‌ಗಳಾದ ಕವಿತಾ ಸನಿಲ್, ಶಶಿಧರ ಹೆಗ್ಡೆ ಮತ್ತಿತರ ನಾಯಕರು ಇದರಲ್ಲಿ ನಡೆದರು.
ಹರೀಶ್ ಕುಮಾರ್, ಐವಾನ್ ಡಿಸೋಜಾ ಮೊದಲಾದವರನ್ನು ಪೋಲೀಸರು ಎತ್ತಿ ಸರಿಸಿದರು.
ಐವಾನ್ ಡಿಸೋಜಾ ಮಾತನಾಡಿ ಬ್ರಿಟಿಷರ ಗುಂಡಿಗೆ ಎದೆ ಕೊಟ್ಟವರು ನಾವು, ಬಿಜೆಪಿ ಪೋಲೀಸರಿಗೆ ಹೆದರುವುದಿಲ್ಲ ಎಂದು ಹೇಳಿದರು.
ಪೋಲೀಸು ವಾಹನಗಳಲ್ಲಿ ಕಾಂಗ್ರೆಸ್‌ನವರು. ಮಹಿಳೆಯರನ್ನು ಪೋಲೀಸು ಅಧಿಕಾರಿಗಳ ವಾಹನಗಳಲ್ಲೆ ಕರೆದೊಯ್ದರು.
ಒಂದು ಮಾಹಿತಿಯಂತೆ ಎಮ್ಮೆಕೆರೆ ಮೈದಾನದಲ್ಲಿ ಬಂಧಿತರನ್ನು ಹಿಡಿದು ಬಿಡುಗಡೆ ಮಾಡಿದರು ಎಂದು ತಿಳಿದು ಬಂದಿದೆ.
ಪೋಲೀಸು ಕಮಿಶನರ್ ಎನ್. ಶಶಿಕುಮಾರ್ ಹಿರಿಯ ಪೋಲೀಸು ಅಧಿಕಾರಿಗಳು ಹಾಜರಾಗಿ ಪರಿಸ್ಥಿತಿ ನಿಭಾಯಿಸಿದರು.