ಬೇಜವಾಬುದಾರಿ ದ್ವೇಷದ ಹೇಳಿಕೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಮೊಕದ್ದಮೆ ದಾಖಲಿಸಲು ಗೌಹಾತಿ ಕೋರ್ಟು ಆದೇಶಿಸಿದೆ.

ಹಲವರ ಸಾವು, ಬದುಕು ಮೂರಾಬಟ್ಟೆಗೆ ದಾರಿ ಮಾಡಿದ ದರಾಂಗ್ ಜಿಲ್ಲೆಯ ಗರುಕುಟಿಯಲ್ಲಿ ನಡೆದ ಜಾಗ ತೆರವು ಕಾರ್ಯಾಚರಣೆಯು ನಮ್ಮ ಬಿಜೆಪಿಯ ಸೇಡಿನ ಕಾರ್ಯಾಚರಣೆ ಎಂದು ಮುಖ್ಯಮಂತ್ರಿ ಭಾಷಣ ಮಾಡಿದರು. ಇದರ ಮೇಲೆ ಕಾಂಗ್ರೆಸ್ ಸಂಸದ ಅಬ್ದುಲ್ ಖಾಲಿದ್ ಅವರು ದೂರು ನೀಡಿದ್ದಾರೆ. ಅದರ ಮೇಲೆ ಮುಖ್ಯಮಂತ್ರಿ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರ್ಟು ಪೋಲೀಸರಿಗೆ ಸೂಚಿಸಿದೆ.