ಬಿಜೆಪಿಯ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ಸೇರಿ ದೇಶದಲ್ಲಿ ಸಬ್ ಕಾ ಸರ್ವ ನಾಶ್ ನಡೆಸಿವೆ ಮತ್ತು ಬಡವರನ್ನು ಹಟಾವೊ ಮಾಡುತ್ತಿವೆ ಎಂದು ಮಾಜೀ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರು ವಿಧಾನ ಸಭೆಯಲ್ಲಿ ಆಪಾದಿಸಿದರು.
ವಾಜಪೇಯಿ ಭಾರತ ಪ್ರಕಾಶಿಸುತ್ತಿದೆ ಎಂದರು. ಎಲ್ಲಿ ಪ್ರಕಾಶಿಸಿದ್ದು. ನಿಮ್ಮ ಡಬಲ್ ಎಂಜಿನ್ ಸರಕಾರಗಳ ನಡುವೆ ತಾಳ ಮೇಳ ಇಲ್ಲ. ಸಾಲ ಮತ್ತು ಸರಕಾರಿ ಆಸ್ತಿ ಮಾರಾಟ ಎರಡೇ ನಿಮ್ಮ ಕೆಲಸ ಎಂದು ಸಿದ್ದರಾಮಯ್ಯ ಹೇಳಿದರು. ಈ ಹಂತದಲ್ಲಿ ಇದೆಲ್ಲ ಕಾಂಗ್ರೆಸ್ ಕಾಲದ ಆಡಳಿತದ ಫಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರತಿ ವಾದ ಹೂಡಿದರು. ಮಾತಿನ ಚಕಮಕಿ ಜೋರಾದಾಗ ಯಾರು ಏನು ಮಾತನಾಡಿದರೆಂದು ಯಾರಿಗೂ ಗೊತ್ತಾಗಲಿಲ್ಲ.