ಮೂಡುಬಿದಿರೆ:- ಇಂದು ಜೈನ ಮಠ ಮೂಡುಬಿದಿರೆಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಕೋವಿಡ್ ಲಸಿಕೆ ಹಾಕಿಸಿ ಕೊಂಡರು. ಅರೋಗ್ಯ ಸೇತು ಆಪ್ ನಲ್ಲಿ ಆಧಾರ್ ಕಾರ್ಡ್ ಮುಖೆನ ಹೆಸರು ನೋಂದಾಯಿಸಿಕೊಂಡು ಇಂದು ಮಾರ್ಚ್ 19, 2021 ರಂದು ಅಪರಾಹ್ನ 3.35 ಕ್ಕೆ ಶ್ರೀ ಸ್ವಾಮೀಜಿ, ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಕೊಂಡು, 15 ನಿಮಿಷ ಲಸಿಕೆ ಹಾಕಿದ ನಂತರ ಲವ ಲವಿಕೆಯಿಂದಲೆ ಶ್ರೀ ಜೈನ ಮಠಕ್ಕೆ ಹಿಂತಿರುಗಿದರು. ಮುಖ್ಯ ವೈಧ್ಯಾಧಿಕಾರಿ ಶಕುಂತಲಾ, ನಾಗರಾಜ್ ಭಟ್ ಮರಕಡ, ಅಭಯ ಕುಮಾರ್ ಉಪಸ್ಥಿತರಿದ್ದರು. ಶ್ರೀ ಗಳು ಅಂತರ್ ರಾಜ್ಯ ಪ್ರಯಾಣ ಆಗಾಗ ಮಾಡುವುದರಿಂದ ಕೊವಿಡ್ ಲಸಿಕೆ ಹಾಕಿಸಿಕೊಂಡರು.