ಶನಿವಾರ ಜಾಗತಿಕವಾಗಿ 4 ಲಕ್ಷದಷ್ಟು ಜನರು ಪಾಸಿಟಿವ್‌ಗೆ ಪಕ್ಕಾದರೆ, 1 ಸಾವಿರದಷ್ಟು ಜನರು ಕೊರೋನಾ ಮರಣ ಕಂಡರು. ಜಗತ್ತಿನಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆಯು 54,01,99,533ಕ್ಕೆ ಏರಿತು. ಹಾಗೆಯೇ ಸೋಂಕು ಸಾವಿಗೀಡಾದವರ ಸಂಖ್ಯೆಯು 63,30,839 ತಲುಪಿತು.
ಶನಿವಾರ ಭಾರತದಲ್ಲಿ 8,329 ನಮ್ಮ ಜನ ಕೊರೋನಾ ಸೋಂಕು ಭಾಜನರಾದರು. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆಯು 4,32,19,491 ದಾಟಿದೆ. ನಿನ್ನೆ ದೇಶದಲ್ಲಿ ಕೊರೋನಾ ಬಲಿ ತೆಗೆದುಕೊಂಡವರ ಸಂಖ್ಯೆಯು 10. ಅಲ್ಲಿಗೆ ಒಟ್ಟು ಸಾವು ಸಂಖ್ಯೆಯು 5,24,757 ಮುಟ್ಟಿದೆ.
ಶನಿವಾರ ರಾಜ್ಯದಲ್ಲಿ 562 ಮಂದಿ ಪಾಸಿಟಿವ್ ಎನಿಸಿದರು. ಒಟ್ಟು ಸೋಂಕಿತರಾದವರ ಸಂಖ್ಯೆಯು 39,55,3871 ದಾಟಿತು. ನಿನ್ನೆ ಕರ್ನಾಟಕದಲ್ಲಿ ಕೊರೋನಾ ಸಾವು ಕಾಣಸಿಲ್ಲ. ಸಾವುಗಳ ಒಟ್ಟು ಸಂಖ್ಯೆಯು 40,066ರಲ್ಲಿ ಇದೆ.
ಶನಿವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕು 2 ವರದಿಯಾಗಿದೆ. ಅಲ್ಲಿಗೆ ಒಟ್ಟು ಸೋಂಕಿತರ ಸಂಖ್ಯೆಯು 1,35,640ಕ್ಕೆ ಏರಿದೆ. ನಿನ್ನೆ ದ. ಕ. ದಲ್ಲಿ ಕೊರೋನಾ ಸಾವು ಸಂಭವಿಸಿಲ್ಲ. ಸಾವು ಸಂಖ್ಯೆ 1,850ರಲ್ಲೆ ಇದೆ.
ಶನಿವಾರ ಉಡುಪಿ ಜಿಲ್ಲೆಯಲ್ಲಿ ಸೋಂಕು 2 ವರದಿಯಾಗಿದೆ. ಒಟ್ಟು ಪಾಸಿಟಿವ್ ಆದವರ ಸಂಖ್ಯೆಯು 95,637ಕ್ಕೆ ಏರಿದೆ. ನಿನ್ನೆ ಸಾವು ಆಗಿಲ್ಲ. ಒಟ್ಟು ಕೊರೋನಾ ಸಾವು ಸಂಖ್ಯೆ 546ರಲ್ಲೇ ಇದೆ.