ವರದಿ ರಾಯಿ ರಾಜ ಕುಮಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿ ಸಿ ಟ್ರಸ್ಟ್   ವತಿಯಿಂದ  ಧರ್ಮಸ್ಥಳ ಪೂಜ್ಯ ಖಾವಂದರ  ಹುಟ್ಟುಹಬ್ಬದ  ಅಂಗವಾಗಿ  ಬೆಳುವಾಯಿ ಸ್ಫೂರ್ತಿ ಭಿನ್ನ ಸಾಮರ್ಥ್ಯ ಹಾಗೂ ತರಬೇತಿ ಕೇಂದ್ರದ  91 ಮಕ್ಕಳಿಗೆ   ಆಹಾರ ಸಾಮಗ್ರಿ ವಿತರಣೆ ಹಾಗೂ ಹಣ್ಣು ಹಂಪಲು ವಿತರಣೆ ಯನ್ನು  ತಾಲೂಕಿನ ಯೋಜನಾಧಿಕಾರಿಯವರು ಹಾಗೂ ತಾಲೂಕಿನ ಸಿಬ್ಬಂದಿ ವರ್ಗ ದವರು ಸೇರಿ   ವಿತರಣೆ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು. ಮಕ್ಕಳು ಪೂಜ್ಯರಿಗೆ  ಹುಟ್ಟುಹಬ್ಬದ  ಶುಭಾಶಯಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಶೆಟ್ಟಿಗಾರ್, ಸಂಸ್ಥೆ ಯ ಪ್ರಿನ್ಸಿಪಾಲ  ಶರ್ಮಿಳಾ ವಾಸು,  ಸಹಾಯಕ ಆಡಳಿತ ಅಧಿಕಾರಿಯವರಾದ ಅನಿತಾ ರೋಡ್ರಗಸ್, ಒಕ್ಕೂಟದ ಅಧ್ಯಕ್ಷರಾದ ಸಂತೋಷ್, ಯೋಜನಾ ಧಿಕಾರಿ ಧನಂಜಯ ರವರು ಉಪಸ್ಥಿತರಿದ್ದರು.