ಉಜಿರೆ: ಕರ್ನಾಟಕ ಸರ್ಕಾರದಿಂದ “ಕೃಷಿ ಪಂಡಿತ” ಪ್ರಶಸ್ತಿ ಪುರಸ್ಕೃತರಾದ ಪುತ್ತೂರಿನ ಪ್ರಗತಿಪರಕೃಷಿ ತಜ್ಞ ಹಾಗೂ ಸಂಪನ್ಮೂಲ ವ್ಯಕ್ತಿ ಕೆ. ಮೋನಪ್ಪ ಕರ್ಕೇರಾ ಅವರನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.
ಪರಿಸರ ಸ್ನೇಹಿಯಾಗಿ, ಸಾವಯವ ಕೃಷಿ, ಅಂತರ್ಜಲ ಸಂರಕ್ಷಣೆ, ಇಂಗು ಗುಂಡಿ ರಚನೆ, ಸಾಗುವಾನಿ ಮರ ಬೆಳೆಸುವುದು, ಹಣ್ಣು-ಹಂಪಲುಗಳಗಿಡ ಬೆಳೆಸುವಿಕೆ, ಔಷಧೀಯ ಸಸ್ಯಗಳು- ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿ ಕೃಷಿಕರಾಗಿದ್ದಾರೆ.ಕೃಷಿಯಲ್ಲಿ ಇವರ ಸೇವೆ-ಸಾಧನೆಯನ್ನು ಮನ್ನಿಸಿ ಹೆಗ್ಗಡೆಯವರು ಕರ್ಕೇರಾ ಅವರನ್ನು ಅಭಿನಂದಿಸಿದರು.