ದಕ್ಷಿಣ ದಿಲ್ಲಿಯ ಮುಂಡ್ಮಾ ಮೆಟ್ರೋ ಬಳಿಯ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ತಡ ರಾತ್ರಿ ಬೆಂಕಿ ಅನಾಹುತ ಉಂಟಾಗಿ 26 ಜನರು ಜೀವಂತ ಕರಕಲಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬೆಂಕಿ ನಂದಿಸಲು 100ರಷ್ಟು ಅಗ್ನಿಶಾಮಕ ವಾಹನಗಳು ಶ್ರಮಿಸಿದವು. ಒಂದನೆಯ ಮಹಡಿಯ ಸಿಸಿಟೀವಿ, ರೂಟರ್ ತಯಾರಿಕಾ ಘಟಕದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತೆಂದು ವರದಿ ಆಗಿದೆ. 70ರಷ್ಟು ಜನರನ್ನು ರಕ್ಷಿಸಲಾಗಿದೆ. ಕರಕಲು ನಡುವೆ ಇನ್ನಷ್ಟು ಹಾನಿಯ ಶೋಧ ನಡೆದಿದೆ.