ಕನ್ನಡದ ಶ್ರೇಷ್ಟ ಕವಿ ಸಾಹಿತಿ ಡಿ ವಿ ಗುಂಡಪ್ಪನವರು ಬರೆದ ಮೇರು ಕೃತಿ ಕನ್ನಡ ಭಾಗವತ ಎಂದೇ ಹೆಸರಾದ ಮಂಕುತಿಮ್ಮನ ಕಗ್ಗವನ್ನು ಪ್ರೊ. ಸ್ಟೀವನ್ ಕ್ವಾಡ್ರಸ್ ಅವರು ಮಂಕುತಿಮ್ಮಾಚೆಂ ಕಾವ್ಯೆಂ ಎಂಬ ಹೆಸರಿನಲ್ಲಿ ಕೊಂಕಣಿಗೆ ಭಾಷಾಂತರ ಮಾಡಿದ್ದು ಅದನ್ನು ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರು ಪ್ರಕಟಿಸಿರುತ್ತಾರೆ. ಆ ಕೃತಿಯನ್ನು ದಿನಾಂಕ 20.5.2022 ರ ಅಪರಾಹ್ನ 3.00 ಕ್ಕೆ ಸಂತ ಅಲೋಶಿಯಸ್ (ಸ್ವಾಯುತ್ತ) ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗುವುದು.

ಸಂತ ಅಲೋಶಿಯಸ್ (ಸ್ವಾಯುತ್ತ) ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ. ಪ್ರವೀಣ್ ಮಾರ್ಟಿಸ್ ಜೆಸ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಒನಿಲ್ ಡಿಸೋಜಾರವರು ಕೃತಿಯ ಲೋಕಾರ್ಪಣೆ ಮಾಡುವರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಗಿರೀಶ್ ಭಟ್ ಅಜಕ್ಕಳರವರು ಹಾಗೂ ಸಂತ ಅಲೋಶಿಯಸ್ (ಸ್ವಾಯುತ್ತ) ಕಾಲೇಜಿನ ರಿಜಿಸ್ಟ್ರಾರ್ ಆದ ಡಾ. ಆಲ್ವಿನ್ ಡೆ’ಸಾರವರು ಮುಖ್ಯ ಅತಿಥಿಗಳಾಗಿರುವರು.