ಪೂರ್ಣ ಕಣ್ಣನ್ನು ತೆಗೆದು ಕಸಿ ಮಾಡುವುದು ಸಾಧ್ಯವಿಲ್ಲ. ಕಾರ್ನಿಯಾವನ್ನು ಮಾತ್ರ ತೆಗೆದು ಕಸಿ ಮಾಡುತ್ತಾರೆ.ಬಕಾರ್ನಿಯಾ ಕಣ್ಣಿನ ಮೇಲ್ಭಾಗದ ಪಾರದರ್ಶಕ ಪಟಲವಾಗಿದ್ದು, ಬೆಳಕನ್ನು ಪಡೆದು ದೃಶ್ಯ ವೀಕ್ಷಿಸಲು ಕನ್ನಡಕದಂತೆ ಸಹಾಯ ಮಾಡುತ್ತದೆ.
ಕಾರ್ನಿಯಾ ಪಾರದರ್ಶಕತೆ ಕಳೆದುಕೊಂಡಾಗ ಕುರುಡು ಕಾಡುತ್ತದೆ. ಸಾಮಾನ್ಯವಾಗಿ ಎರಡು ಕಣ್ಣಿನ ಎರಡು ಕಾರ್ನಿಯಾವನ್ನು ಇಬ್ಬರಿಗೆ ಕಸಿ ಮಾಡಲಾಗುತ್ತದೆ. ಪುನೀತ್ ರಾಜ್‍ಕುಮಾರ್ ಕಣ್ಣನ್ನು ನಾಲ್ವರಿಗೆ ಹೊಂದಿಸಲಾಗಿದ್ದು, ಇದು ಈ ಸುತ್ತಿನಲ್ಲಿ ಹೊಸತು.
1994ರಲ್ಲಿ ವರನಟ ರಾಜ್ ಕುಮಾರ್ ಅವರು ಕಣ್ಣಿನ ಬ್ಯಾಂಕ್ ಉದ್ಘಾಟಿಸುವಾಗ ತನ್ನ ಕುಟುಂಬದ ಎಲ್ಲರ ಕಣ್ಣು ದಾನ ಘೋಷಿಸಿದ್ದರು ವ್ಯಕ್ತಿ ಸತ್ತ ನಾಲ್ಕರಿಂದ ಆರು ಗಂಟೆಗಳ ಒಳಗೆ ಕಾರ್ನಿಯಾವನ್ನು ತಜ್ಞರು ತೆಗೆಯುತ್ತಾರೆ.
ಪುನೀತ್ ರಾಜ್‍ಕುಮಾರ್ ಅವರ ಕಾರ್ನಿಯಾವನ್ನು ಎರಡು ಪದರಗಳಲ್ಲಿ ಬೇರ್ಪಡಿಸಲಾಗಿದೆ. ಅವನ್ನು ನಾಲ್ವರು ಕಾರ್ನಿಯಾ ಕುರುಡು ಇರುವವರಿಗೆ ಕಸಿ ಮಾಡಲಾಗಿದೆ. ಇವನ್ನು ಎದುರಿನ ಸೂಪರ್‌ಫಿಸಿಯಲ್ ಮತ್ತು ಹಿಂದಿನ ಎಂಡೋತೆಲಿಯಲ್ ಆಧಾರದಲ್ಲಿ ಕಸಿ ಮಾಡಿದ್ದಾಗಿ ತಜ್ಞರು ಹೇಳಿದ್ದಾರೆ.