ತನ್ನ ದೇಶವು ಮೂರು ಬಾರಿ ಫಿಫಾ ವಿಶ್ವ ಕಪ್ ಫುಟ್ಬಾಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬ್ರೆಜಿಲ್‌ನ ಫುಟ್ಬಾಲ್ ದಂತ ಕತೆ ಎನಿಸಿದ್ದ ಪೀಲೆ ಬ್ರೆಸಿಲಿಯಾದಲ್ಲಿ ನಿಧನರಾದರು.
18ರ ಪ್ರಾಯದಲ್ಲಿ ದೇಶದ ತಂಡದಲ್ಲಿ ಆಡ ತೊಡಗಿದ ಪೀಲೆ ಅವರು ಬ್ರೆಜಿಲ್ ತಂಡವು 1958, 1962, 1970 ಎಂದು ಮೂರು ಬಾರಿ ಫಿಫಾ ವಿಶ್ವ ಕಪ್ ಚಾಂಪಿಯನ್ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2021ರಿಂದ ಕ್ಯಾನ್ಸರಿನಿಂದ ಬಾಧಿತರಾಗಿದ್ದ ಅವರಿಗೆ ಚಿಕಿತ್ಸೆ ನಡೆದಿತ್ತು. ಇದೇ ನವೆಂಬರ್‌ನಲ್ಲಿ ಕಾಯಿಲೆ ಉಲ್ಬಣಗೊಂಡ ಕಾರಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಗೆದ್ದು ಬರುವೆ ಎಂದು ಅವರು ಅಭಿಮಾನಿಗಳಿಗೆ ಮಾಡಿದ ಪೋಸ್ಟ್ ನಿಜವಾಗಲಿಲ್ಲ. ನಿನ್ನೆ ಸಾವಿಗೀಡಾಗುವಾಗ ಅವರ ಪ್ರಾಯ 82.
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 77 ಗೋಲು ಹಾಗೂ ಕ್ಲಬ್ ಪಂದ್ಯಗಳಲ್ಲಿ 775 ಗೋಲು ಗಳಿಸಿದ್ದರು. 100ಕ್ಕೂ ಹೆಚ್ಚು ಬಾರಿ ಹ್ಯಾಟ್ರಿಕ್ ಗೋಲು ಗಳಿಸಿದ ಸಾಧನೆ ಅವರದು.