ಕಿನ್ನಿಗೋಳಿ: ಯಕ್ಷಗಾನ ಶಿಷ್ಟಪರಂಪರೆಯ ಕಲೆಯಾಗಿದ್ದು ಆದರೇ ಮೂಲಚೌಕಟ್ಟಿಗೆ ದಕ್ಕೆ ಆಗಬಾರದಲ್ಲಿ ಬದಲಾವಣೆ ಆಗಬೇಕು ಈ ನಿಟ್ಟಿನಲ್ಲಿ ಕಲೆಯ ಬೆಳೆಯಬೇಕು ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಅವರು ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಕಿನ್ನಿಗೋಳಿಯ ರಾಜರತ್ನಪುರದ ಯಕ್ಷ ಕೌಸ್ತುಭ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವರ್ಷದ ವಾರ್ಷಿಕೋತ್ಸವದ ಬಣ್ಣದ ಮನೆ ಎಂಬ ಶೀರ್ಷಿಕೆಯಡಿಯಲ್ಲಿ ಉಚಿತ ತೆಂಕುತಿಟ್ಟು ಯಕ್ಷಗಾನ ಬಣ್ಣಗಾರಿಕೆ ತರಬೇತಿ ಕಮ್ಮಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ. ಉದ್ಯಮಿ ಪೃಥ್ವಿರಾಜ್ ಆಚಾರ್ಯ,ಯಕ್ಷಗಾನ ಕಲಾವಿದ ಗಣೇಶ್ ಚಂದ್ರಮಂಡಲ, ಕಿನ್ನಿಗೋಳಿಯ ಮೋಹಿನಿ ಕಲಾ ಸಂಪದದ ಗಂಗಾಧರ ಡಿ. ಶೆಟ್ಟಿಗಾರ್, ಯಕ್ಷಗಾನ ಕಲಾವಿದರಾದ ಬಾಲಕೃಷ್ಣ ಮಿಜಾರು, ಶಶಿಧರ್ ಪಂಜ, ಜಯರಾಮ ಶೆಟ್ಟಿ ಬಾಕ್ಯರ್ಕೋಡಿ, ಸುರೇಶ್ ಕೊಲೆಕಾಡಿ, ಬಾಲಗಣೇಶೋತ್ಸವ ಸಮಿತಿಯ ಸಂದೀಪ್, ಸಂಘಟಕ ಶರತ್ ಕೊಡೆತ್ತೂರು ಮತ್ತಿತರರು ಉಪಸ್ಥಿರಿದ್ದರು. 100 ಕ್ಕೂ ವಿದ್ಯಾರ್ಥಿಗಳು ಕಲಾಸ್ತಕರು ಕಮ್ಮಟದಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಮಿತ್ರರು ಪಂಜನಡ್ಕ ಹಾಗೂ ಜಿಲ್ಲೆಯ ಹೆಸರಾಂತ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷ-ನಾಟ್ಯ-ಹಾಸ್ಯ-ವೈಭವ ನಡೆಯಿತು