ಅಮುಲ್ ಮತ್ತು ನಂದಿನಿ ಡೈರಿ ವಿಲೀನ ಮಾಡುವುದಾಗಿ ಕರ್ನಾಟಕದ ಮಂಡ್ಯಕ್ಕೆ ಬಂದಿದ್ದ ಒಕ್ಕೂಟ ಸರಕಾರದ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅದನ್ನು ಖಂಡಿಸಿ ಕರ್ನಾಟಕದ ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಕರ್ನಾಟಕದ ಹಾಲಿಗೆ ಗುಜರಾತಿನ ಹುಳಿ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಂದಿನಿಯನ್ನು ಅಮುಲ್ ಜೊತೆಗೆ ವಿಲೀನ ಮಾಡುವ ಅವಕಾಶ ಇಲ್ಲ ಎಂದು ಹೇಳಿದರು.
ಗುಜರಾತಿನಲ್ಲಿ ಬಿಜೆಪಿ ಬಲವಾದಾಗ ಮೊದಲು ಮಾಡಿದ ಕೆಲಸ ಅಮುಲ್ ರೂವಾರಿ ಕುರಿಯನ್ ರನ್ನು ಓಡಿಸಿದ್ದು. ಆಮೇಲೆ ಡ್ಯಾಮೇಜ್ ಕಂಟ್ರೋಲ್‌ಗೆ ಅಮುಲ್ ಎದುರು ಕುರಿಯನ್‌ರ ಮೂರ್ತಿ ನಿಲ್ಲಿಸಿದ್ದು ಇನ್ನೊಂದು ಕತೆ. ಈಗ ಅವೆಲ್ಲ ಮತ್ತೆ ಚರ್ಚೆಗೆ ಬಂದಿವೆ.