ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಮಾಹಿತಿ ಜನವರಿ 31 ರಂದು ನೀಡಲಾಯಿತು. ಬೆಂಗಳೂರು ಸೂರ್ಯ ಫೌಂಡೇಶನ್ ನ ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಮಾಹಿತಿಯನ್ನು ನೀಡಿದರು. 

ಸರಕಾರದ ಯೋಜನೆಯಂತೆ ಗ್ರಾಮೀಣ ಕೃಪಾಂಕ ಪಡೆಯಲು ಒಂದನೇ ತರಗತಿಯಿಂದ ಹತ್ತನೇ ತರಗತಿಯ ತನಕ ನಿರಂತರವಾಗಿ ಗ್ರಾಮೀಣ ಶಾಲೆಯಲ್ಲಿಯೇ ಕಲಿಯಬೇಕು. ಅದೇ ರೀತಿ ಕನ್ನಡ ಮಾಧ್ಯಮ ಸೌಲಭ್ಯಕ್ಕಾಗಿ ಕೂಡಾ ವಿದ್ಯಾರ್ಥಿಗಳು ನಿರಂತರವಾಗಿ ಕನ್ನಡ ಮಾಧ್ಯಮದಲ್ಲಿಯೇ ಹತ್ತನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಬೇಕು. ಈ ಪ್ರಕಾರ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಆದ್ಯತೆ ಹಾಗೂ ಇತರರಿಗಿಂತ ಮೊದಲು ಪ್ರಾಧಾನ್ಯತೆ ಪಡೆಯಬಹುದು ಎಂದರು. ಮುಖ್ಯ ಶಿಕ್ಷಕಿ ಚಂದ್ರಕಾಂತಿ ಸ್ವಾಗತಿಸಿದರು. ಶಿಕ್ಷಕ ದೊರೆಸ್ವಾಮಿ ಕಾರ್ಯಕ್ರಮ ಸಂಘಟಿಸಿದ್ದರು. ಶಿಕ್ಷಕಿ ಚಿತ್ರಾವತಿ ವಂದಿಸಿದರು.