ಜನವರಿ 29 ರಂದು ಅಂಬಲಪಾಡಿಯ ಭವಾನಿ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿ ಹಾಗೂ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ದಾಸವರೇಣ್ಯ ಪುರಂದರ ದಾಸರ ಆರಾಧನೆ ಸಂದರ್ಭ ಆಯೋಜಿಸಲಾದ ಕಚುಸಾಪ ಸಂಭ್ರಮ  ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವುದರ ಮುಖಾಂತರ ಚಾಲನೆಯನ್ನು ನೀಡಲಾಯಿತು.ಹಾಗೂ ಪುರಂದರ ದಾಸರ ಭಾವಚಿತ್ರಕ್ಕೆ ವಿದ್ಯಾನಾಥ ಶೈಣೈ ಅವರು ಪುಷ್ಪಾರ್ಚನೆ ಮಾಡಿ, ದಾಸರ ಚಿಂತನೆಗಳನ್ನು ಹಂಚಿಕೊಂಡರು. 

ಹಿರಿಯ ಕವಯಿತ್ರಿ ಸಾವಿತ್ರಿ ಮನೋಹರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಅತಿಥಿಗಳಾಗಿ ಶ್ರೀ ಸೋಮಶೇಖರ್ ಶೆಟ್ಟಿ ಕಚುಸಾಪ ಉಡುಪಿ. ಜಯಾನಂದ ಪೆರಾಜೆ . ಜಿಲ್ಲಾಧ್ಯಕ್ಷರು ,ದಕ್ಷಿಣ ಕನ್ನಡ.ಇವರು ಆಶಯ ನುಡಿಗಳನ್ನಾಡಿದರು.ಸುರೇಶ್ ನೆಗಳ ಗುಳಿ, ಶಾಂತ ಪುತ್ತೂರು, ಚೇತನ್ ಕೊಟ್ಟೂರು. ಅಶ್ವಿನಿ ಕುಲಾಲ್ ಕಡ್ತಲ. ಕೃಷ್ಣಮೂರ್ತಿ ಕುಲಕರ್ಣಿ. ಜೆ ಯು ನಾಯಕ್. ರಾಜು ಎನ್ ಆಚಾರ್ಯ. ಎಲ್ಲ ಹಿರಿಯ ಕಿರಿಯ ಕವಿಗಳಿಂದ ಕವನವಾಚಿಸಲಾಯಿತು. 

ಪ್ರೇಮ ಬಸನಗೌಡ ಬಿರಾದಾರ ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. 

ಇದೇ ಸಂದರ್ಭದಲ್ಲಿ, ವಿದ್ವಾನ್ ರಘುಪತಿ ಭಟ್. ಇವರ ಸುಪುತ್ರನಾದ ಸಮಿತ್ತ 'ಗಿನ್ನಿಸ್ ದಾಖಲೆ' ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಯನ್ನು ಗಳಿಸಿದ ಹಿರಿಮೆ .ನಾಲ್ಕು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಅತ್ಯದ್ಭುತ ಪ್ರತಿಭೆ ಭಗವದ್ಗೀತೆಯಲ್ಲಿ ಅನೇಕ ಶ್ಲೋಕಗಳನ್ನು ಹೇಳಬಲ್ಲ. ಈ ಬಾಲಕನಿಗೆ ಕಚುಸಾಪದಿಂದ ಸನ್ಮಾನಿಸಲಾಯಿತು.