(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಜ.30: ದಕ್ಷಿಣ ಮುಂಬಯಿ ಇಲ್ಲಿನ ಕೊಲಾಬಾ ಕಫ್‌ಪರೇಡ್‌ನಲ್ಲಿ ಕಳೆದ ಸುಮಾರು ಮೂರುವರೆ ದಶಕಗಳಿಂದ ಸೇವಾ ನಿರತ ಶ್ರೀ ಸಾಯಿನಾಥ ಮಿತ್ರ ಮಂಡಳಿ (ರಿ.) ತನ್ನ 36ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಸಾಯಿಬಾಬಾ ಪೂಜೆ ಹಾಗೂ ಸಾಯಿ ಭಂಡಾರವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಇಂದಿಲ್ಲಿ ಗುರುವಾರ ಸಂಜೆ ಕಪ್‌ಪರೇಡ್‌ನ ಸಾಯಿ ಸದನ್‌ನಲ್ಲಿ ನೇರವೇರಿಸಿತು.
ಕೊಲಾಬಾ ನಗರದ ವಾರ್ಷಿಕ ಜಾತ್ರೆ ಎಂದೇ ಪ್ರಸಿದ್ಧಿಯ ವಾರ್ಷಿಕ ಕಾರ್ಯಕ್ರಮ ನಿಮಿತ್ತ ಇಂದಿಲ್ಲಿ ಶ್ರೀ ಸಾಯಿ ಅಭಿಷೇಕ, ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಸಾಯಿ ಮಹಾರತಿ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಹಾಗೂ ಶ್ರೀ ಸಾಯಿಬಾಬಾ ಅವರ ಭಂಡಾರ ಸಂಜೆ ನಡೆಸಲ್ಪಟ್ಟಿತು. ವಿದ್ವಾನ್ ಶ್ರೀ ಭವಾನಿಶಂಕರ್ ಭಟ್ (ಘಾಟ್ಕೋಪರ್) ತಮ್ಮ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಮಹಾಪೂಜೆ ಮತ್ತು ವಿದ್ವಾನ್ ಶ್ರೀ ರಾಕೇಶ್ ಭಟ್ ಶ್ರೀ ಸಾಯಿಬಾಬಾ ಪೂಜೆ ನೆರವೇರಿಸಿದರು. ಎನ್.ಕೃಷ್ಣ ಭಟ್ ಪೂಜೆಗೈದು ನೆರೆದ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಮೋಹನ್ ಮಯ್ಯ ಪೂಜಾಧಿಗಳಿಗೆ ಸಹಕರಿಸಿದರು.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಮಾಜಿ ಆಡಳಿತ ಮೊಕ್ತೇಸರ, ಮನಿಫೋಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್ ಎಸ್.ಭಂಡಾರಿ ಇವರ ಮುಂದಾಳುತ್ವ ಮತ್ತು ಮಾರ್ಗದರ್ಶನದಲ್ಲಿ ಕಳೆದ ಸುಮಾರು ಮೂರುವರೆ ದಶಕಗಳಿಂದ ನಿರಂತರವಾಗಿ ನೆರವೇರುತ್ತಿರುವ ಜಾತ್ರೆಯಲ್ಲಿ ಈ ಬಾರಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ಎನ್.ನಾರ್ವೇಕರ್, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ರಂಜಿತ್ ಎಸ್.ಭಂಡಾರಿ, ಮಾಜಿ ಅಧ್ಯಕ್ಷರುಗಳಾದ ನ್ಯಾಯವಾದಿ ಶೇಖರ ಎಸ್.ಭಂಡಾರಿ, ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ, ಪ್ರಭಾಕರ್ ಪಿ.ಭಂಡಾರಿ, ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಸಲ್ಫಾ ಇದರ ಧರ್ಮಪಾಲ್ ಪಿ.ಕೋಟ್ಯಾನ್, ಸುರೇಶ್ ಶೆಟ್ಟಿ ಕಣಂಜಾರು, ಸುನೀಲ್ ಅಮೀನ್, ಕೆ.ಗೋಪಾಲ್ ಭಂಡಾರಿ, ಕವಿತಾ ಭಂಡಾರಿ, ಪಲ್ಲವಿ ರಂಜಿತ್ ಭಂಡಾರಿ, ಶಶಿಧರ್ ಡಿ.ಭಂಡಾರಿ, ರಾಕೇಶ್ ಭಂಡಾರಿ ಸೇರಿದಂತೆ ನೂರಾರು ಗಣ್ಯರು, ಸಾವಿರಾರು ಭಕ್ತರು ಆಗಮಿಸಿ ಸಾಯಿಬಾಬಾರ ಕೃಪೆಗೆ ಪಾತ್ರರಾದರು.
ಶ್ರೀ ಸಾಯಿನಾಥ ಮಿತ್ರ ಮಂಡಳಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಶೋಭಾ ಸುರೇಶ್ ಭಂಡಾರಿ, ಕು| ಅನಘ ಭಂಡಾರಿ, ಸೌರಭ್ ಎಸ್.ಭಂಡಾರಿ, ಮೇಘಾ ಎಸ್.ಭಂಡಾರಿ ಮತ್ತು ಮಾ| ಆರ್ಯಮಾನ್ ಸೌರಭ್ ಭಂಡಾರಿ, ಉಪಸ್ಥಿತರಿದ್ದು ಸಾಯಿಭಕ್ತರಿಗೆ ಸ್ವಾಗತಿಸಿ ವಂದಿಸಿದರು.