ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೆಕಲ್ ತಿರುಪತಿ ಬೆಟ್ಟದ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದ ಗ್ಯಾಲರಿಯಲ್ಲಿ ಇಡಲು ತಯಾರಿಸಿದ್ದ 13 ದೇವರ ಮೂರ್ತಿಗಳನ್ನು ಕಿಡಿಗೇಡಿಗಳು ಪುಡಿಗಟ್ಟಿ ಪರಾರಿಯಾಗಿದ್ದಾರೆ.

ಕಾಂಕ್ರೀಟ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಈ ವಿಗ್ರಹಗಳನ್ನು ತಯಾರಿಸಲಾಗಿತ್ತು. ಬಣ್ಣ ಬಳಿಯುವ ಕೆಲಸ ಮಾತ್ರ ಬಾಕಿಯಿತ್ತು. ಕೆಲವರೊಡನೆ ಮೂತ್ರ ಮಾಡುವ ಬಗೆಗೆ ಎದ್ದ ವಿವಾದದಲ್ಲಿ ಕಿಡಿಗೇಡಿ ಗುಂಪು ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿ ಮೂರ್ತಿ ಮುರಿದಿದೆ.

ಸ್ಥಳದಲ್ಲಿ ಸಿಸಿಟೀವಿ ಇರಲಿಲ್ಲ. ದುಷ್ಕರ್ಮಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಡಿವೈಎಸ್‌ಪಿ ಅಶೋಕ್ ತಿಳಿಸಿದ್ದಾರೆ.