ಉಡುಪಿ : ಏಕ ಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆ ಯತ್ನಿಸುವ ಬದಲು ನಮಗೆ ಪರಿಚಿತ ಮತ್ತು ಪರಿಣತಿ ಇರುವ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿಶ್ರಮ ವಹಿಸಿದರೆ ಶ್ರೇಯಸ್ಸು ಸಾಧ್ಯ . ಕಠಿಣ ಪರಿಶ್ರಮ ತಾಳ್ಮೆ ಏಕಾಗ್ರತೆ ಸತತ ಸಾಧನೆ ಇದ್ದಲ್ಲಿ ಅಸಾಧ್ಯ ಎಂಬ ಶಬ್ದವನ್ನೇ ಅಳಿಸಿಬಿಡಬಹುದು .ಹಾಗಾಗಿ ಅಭಿವೃದ್ಧಿಯ ಶಾಖೆಯನ್ನು ಆಯ್ದುಕೊಳ್ಳುವುದರಲ್ಲಿಯೇ ಯಶಸ್ಸಿನ ಕೀಲಿಕೈ ಅಡಗಿದೆ ಎಂದು ಲಯನ್ಸ್ ವಲಯಾಧ್ಯಕ್ಷೆ ಸಾಧನಾ ಮಲ್ಯ ಮಣಿಪಾಲ ಹೇಳಿದರು .

ರಾಜ್ಯ ಯುವ ಸಬಲೀಕರಣ ಮತ್ತು ಶಾಲಿನಿ ಇಲಾಖೆಯು ಕರ್ನಾಟಕ ಒಲಿಂಪಿಕ್ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆಸಿದ ರಾಜ್ಯ ಮಿನಿ ಒಲಿಂಪಿಕ್ ಕ್ರೀಡಾಕೂಟದ ಶಾಟ್ಪುಟ್ ಮತ್ತು ಡಿಸ್ಕಸ್ ವಿಭಾಗದ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿ ಎರಡು ಚಿನ್ನದ ಪದಕ ಗಳಿಸಿದ ಉಡುಪಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಅನುರಾಗ್ ಜಿ .ಅವರಿಗೆ ಕಾರ್ಕಳ ಹೊಸಸಂಜೆ ಬಳಗ ಅಜ್ಜರಕಾಡು ಕ್ರೀಡಾಂಗಣದಲ್ಲಿ ಮೇ 30ರ ಸೋಮವಾರ ಆಯೋಜಿಸಿದ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

 ಕರಾಟೆ ಶಿಕ್ಷಕಿ ಪ್ರವೀಣಾ ಸುವರ್ಣ, ಸಮಾಜಸೇವಕ ಜಗದೀಶ ಪೂಜಾರಿ, ಕ್ರೀಡಾ ತರಬೇತುದಾರೆ ಶಾಲಿನಿ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು . 

ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಪದ್ಮಾ ಕಿಣಿ ಅಧ್ಯಕ್ಷತೆ ವಹಿಸಿದ್ದರು . 

ಬಂಗೇರಾ ಸ್ವಾಗತಿಸಿದರು .ಹೊಸಸಂಜೆ ಬಳಗದ ಅಧ್ಯಕ್ಷ ಆರ್ .ದೇವರಾಯ ಪ್ರಭು ಕಾರ್ಯಕ್ರಮ ಸಂಯೋಜಿಸಿದರು .ಅವನೀ ಗಣೇಶ್ ವಂದಿಸಿದರು .