ಮೂಡಬಿದಿರೆ: ಸ್ವಸ್ತಿಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜಿನ 2022 -2023 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಯು ದಿನಾಂಕ 30 /6/ 2022 ರಂದು ಶ್ರೀ ಮಠದ ಸಭಾಭವನದಲ್ಲಿ ಜರುಗಿತ್ತು ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಪಾವನ ಸಾನಿಧ್ಯವನ್ನು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ವಹಿಸಿದ್ದರು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರುಉಪನ್ಯಾಸಕರು ಭಾಗವಹಿಸಿದ್ದರು ವಿದ್ಯಾರ್ಥಿ ಸಂಘದ ನಾಯಕನಾಗಿ ರಕ್ಷಿತ್ ಅವರು ಹಾಗೂ ಕಾರ್ಯದರ್ಶಿಯಾಗಿ ಅನ್ವಿತಾ ಪ್ರಮಾಣ ವಚನವನ್ನು ಸ್ವೀಕರಿಸಿದರು. 

ವಿದ್ಯಾರ್ಥಿಗಳನ್ನುದ್ದೇಶಿಸಿ ಸ್ವಾಮೀಜಿಯವರು ವಿಧ್ಯೆ ಯಾರಿಂದಲೊ ಅಪಹರಿಸಲಾಗದ ಸಂಪತ್ತು ವಿದ್ಯಾರ್ಥಿ ಗಳು ಕಲಿಕೆ ಗೆ ಗಮನ ನೀಡಿ, ಅರೋಗ್ಯ ಕಾಪಾಡುದರ ಜತೆಗೆ ನಿಮ್ಮ ಮನೆ ಹಾಗೂ ಶಾಲಾ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು ವಿದ್ಯಾರ್ಥಿನಿ ಕೀರ್ತನ ಕಾರ್ಯಕ್ರಮ ನಿರ್ವಹಿಸಿದರು ವಿದ್ಯಾರ್ಥಿನಿ ಅನ್ವಿತಾ ಧನ್ಯವಾದವಿತ್ತರು