2021ರ ಜುಲೈ ಹಾಗೂ ಡಿಸೆಂಬರ್ ನಡುವೆ ಟ್ವಿಟರ್‌ನಿಂದ ಸುದ್ದಿ ಸಂಸ್ಥೆಗಳು ಹಾಕಿದ್ದನ್ನು ತೆಗೆಯುವಂತೆ ಮನವಿ ಮಾಡಿದವರಲ್ಲಿ ಭಾರತ ಎರಡನೆಯ ಸ್ಥಾನದಲ್ಲಿ ಇದ್ದರೆ, ಅಮೆರಿಕ ಸಂಯುಕ್ತ ಸಂಸ್ಥಾನವು ಮೊದಲ ಸ್ಥಾನದಲ್ಲಿದೆ ಎಂದು ಟ್ವಿಟರ್ ಸಂಸ್ಥೆ ಹೇಳಿದೆ.
ಈ ಅವಧಿಯಲ್ಲಿ ತೆಗೆಯಲು 326 ಕಾನೂನನ್ವಯ ಮನವಿಗಳು ಬಂದಿದ್ದು, ಅದರಲ್ಲಿ ಅರ್ಧಕ್ಕೆ ಸಮೀಪ ಯುಎಸ್‌ಎಯದಾಗಿದೆ.
ಭಾರತ 114, ಟರ್ಕಿ 78, ರಶಿಯಾ 55, ಪಾಕಿಸ್ತಾನ 48 ತೆಗೆಯಲು ಸಲ್ಲಿಸಿದ ಮನವಿಗಳಾಗಿವೆ. 2021ರ ಜನವರಿಯಿಂದ ಜೂನ್ ನಡುವಣ ಅವಧಿಗಿಂತ 103% ಹೆಚ್ಚು ಮನವಿಗಳು ಬಂದುದಾಗಿ ಟ್ವಿಟರ್ ಹೇಳಿದೆ.