ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರದ ಸೌಂದರ್ಯಕರಣದ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಸರ್ಕಲ್‍ಗಳ ರಚನೆ, ಹಣ ದುರುಪಯೋಗದ ಬಗ್ಗೆ ಆಗ್ರಹಿಸಿ ಮತ್ತು ಕೂಡಲೇ ಸರ್ಕಲ್‍ಗಳನ್ನು ತೆಗೆದು ಹಾಕಲು ಒತ್ತಾಯಿಸಿ ಮಾಜಿ ಶಾಸಕ ಐವನ್ ಡಿ ಸೋಜರವರ ನೇತೃತ್ವದಲ್ಲಿ ಅವೈಜ್ಞಾನಿಕದ ಸರ್ಕಲ್‍ಗಳ ಪರೀಶೀಲನೆ ನಡೆಯಿತು. 

ಮಂಗಳೂರು ಮಹಾನಗರ ಪಾಲಿಕೆಯ ಸ್ಟೇಟ್‍ಬ್ಯಾಂಕಿನ ಬಳಿ ಪ್ರಾಯೋಜಕವಾಗಿ ಅನಗತ್ಯ ರಸ್ತೆಗಳ ವಿಭಾಜಕ ಮತ್ತು ರಸ್ತೆ ಮಧ್ಯೆ ಪಾರ್ಕುಗಳ ರಚನೆ ಬಗ್ಗೆ ಅನೇಕ ಸಾರ್ವಜನಿಕರಿಂದ ದೂರು ಬಂದಿದ್ದು,  ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದು, ಈ ವರದಿ ಆಧರಿಸಿ, ಐವನ್ ಡಿ ಸೋಜರವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು ಮತ್ತು ಜನರ ಅಭಿಪ್ರಾಯ ಪಡೆದುಕೊಳ್ಳಲಾಯಿತು. ಈ ಸಂಬಂಧ ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ  ಅನಧೀಕೃತವಾಗಿ ಮತ್ತು ವಾಹನ ಅಪಘಾತಗಳಿಗೆ ಆಹ್ವಾನ ನೀಡುವ ರೀತಿಯಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು 3 ತಿಂಗಳ ಹಿಂದೆ ನಿರ್ಮಾಣವಾದ ರಸ್ತೆ ಅಗೆದು ಪುನಃ ರಸ್ತೆ ನಿರ್ಮಾಣ ಮಾಡುವ ಬಗ್ಗೆ, ಜ್ಯೋತಿ ಕಾಲೇಜಿನ ಬಳಿ ನಡೆಯುವ ಕಾಮಾಗಾರಿ ಬಗ್ಗೆ ತೀವ್ರ ಅಸಮಾಧನ ವ್ಯಕ್ತಪಡಿಸಲಾಯಿತು. ಸಾರ್ವಜನಿಕರ ಹಣ ಪೋಲು  ಮಾಡುವ ಬಗ್ಗೆ, ಸೌಂದರೀಕರಣದ ಹೆಸರಿನಲ್ಲಿ ಖರ್ಚು ಮಾಡಿದ ಹಣದ ಬಗ್ಗೆ ಶ್ವೇತ ಪತ್ರ(ವೈಟ್ ಪೇಪರ್) ಬಿಡುಗಡೆ ಮಾಡಬೇಕೆಂದು ಸಾರ್ವಜನಿಕರೊಂದಿಗೆ ಮಾತನಾಡುತ್ತಾ ತಿಳಿಸಿದರು ಹಾಗೂ ನಗರದ ಎಲ್ಲಾ ಸರ್ಕಲ್ ಗಳನ್ನು ಪರಿಶೀಲಿಸಲಾಯಿತು.  

ಪಳ್ನೀರ್ –ವೆಲೆನ್ಸಿಯಾ ರಸ್ತೆ(ಬಲ್ಮಠ) ಮತ್ತು ವರ್ಷಪೂರ್ತಿ ರಸ್ತೆ ಅಗೆದುಹಾಕುವ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. 

ಸ್ಮಾರ್ಟ್ ಸಿಟಿ ಬಗ್ಗೆ ಪೋಲಿಸ್ ವರಿಷ್ಠಾಧಿಕಾರಿ, ಮ.ಮ.ನಗರ ಪಾಲಿಕೆಯ ಕಮಿಷನರ್ ಮತ್ತು ಜಿಲ್ಲಾಧಿಕಾರಿಗೆ ಸಂಪರ್ಕಿಸಿ ಮಾತುಕತೆ ನಡೆಸಲಾಯಿತು. 

ಈ ಸಂದರ್ಭದಲ್ಲಿ ಪ್ರಾದ್ಯ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಶಿ ಜಿ.ಪಿರೇರಾ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಯುವ ಕಾಂಗ್ರೆಸ್ ನಾಯಕ ಹಸನ್ ಪಳ್ನೀರ್, ರಮಾನಂದ ಪೂಜಾರಿ, ಸೌಹಾನ್ ಮಂಗಳಾದೇವಿ, ಸಿ.ಎಂ.ಮುಸ್ತಫ, ಸತೀಶ್ ಪೆಂಗಲ್, ಸಲೀಂ ಮುಕ್ಕ, ಇಮ್ರಾನ್, ಪ್ರೇಮ್ ಬಲ್ಲಾಲ್ ಬಾಗ್, ಅಬಿಬುಲ್ಲ, ವಿಕ್ಟೋರಿಯಾ, ಪಿಯುಸ್ ಮೊಂತೆರೊ, ಮಿಲಾಜ್ ಅತ್ತಾವರ, ಪ್ರಜ್ವಲ್ ಸುವರ್ಣ, ಆಕಾಶ್ ಶೆಟ್ಟಿ, ಮಧುಕರ್ ಶೆಟ್ಟಿ, ಅಭೀರಾಮ್ ಬಂಗೇರ, ಮುಂತಾದವರು ನಿಯೋಗದಲ್ಲಿದ್ದರು.