ನನ್ನವಳು ಈ ಪೃಥ್ವಿಯಂತಹ ಸಹನಶೀಲತೆಯ ಗುಣಗಳ ಹೊಂದಿದವಳು ಇವಳು
ನನ್ನವಳು ತಾನು ಹೆಜ್ಜೆ ಇಟ್ಟಲೆಲ್ಲ ಸುಮಧುರ ಸಂತೋಷ ಭರಿತ ರಸದ ಸಾಗರವನ್ನು ಹರಿಸಿದವಳು ಇವಳು
ನನ್ನವಳು ನನ್ನ ಮನದ ಮಾತುಗಳನ್ನು ಹೇಳದೆಯೇ ತಿಳಿಯುವವಳು ಇವಳು
ನನ್ನವಳು ನನ್ನ ಭಾವನೆಗಳಿಗೆ ಸ್ಪಂದಿಸುತ್ತ ಜೀವನದುದ್ದಕ್ಕೂ ನಡೆಯುವವಳು ಇವಳು
ನನ್ನವಳು ನನ್ನ ಮನೆಯ ಮಂದಿರದ ದೇವತೆಯಾದವಳು ಇವಳು
ನನ್ನವಳು ನನ್ನ ಮನೆಯ ಹೃದಯದ ಭಾಗವಾದವಳು ಇವಳು
ನನ್ನವಳು ಪ್ರತಿದಿನ ನಾ ಬರುವ ದಾರಿಯನು ಕಾತುರದಿಂದ ಕಾಯುವವಳು ಇವಳು
ನನ್ನವಳು ನನಗೆ ಹಸಿವಾಗುವ ಮುನ್ನವೇ ಆ ಹಸಿವು ನಿಗಿಸಿದವಳು ಇವಳು
ನನ್ನವಳು ಮನೆಯಲ್ಲಿ ನಾನಾ ತರಹದ ಪಾತ್ರಗಳ ಮಾಡುತ್ತ ಸಾಗುವವಳು ಇವಳು
ನನ್ನವಳು ಮನೆಯ ಜನರ ಸಣ್ಣ ಸಣ್ಣ ವಿಷಯಗಳನ್ನು ಗಮನಿಸುವವಳು ಇವಳು
ನನ್ನವಳು ತನ್ನ ಬಗ್ಗೆ ಕಿಂಚಿತ್ತು ಯೋಚಿಸದೆ ಮನೆಯ ಸಂತೋಷವನ್ನೇ ತನ್ನ ಸಂತೋಷವೇನ್ನುವವಳು ಇವಳು
ನನ್ನವಳು ತನ್ನೆಲ್ಲ ಕನಸುಗಳನ್ನು ಮುಚ್ಚಿಟ್ಟು ತನ್ನ ಮನೆ ಜನರ ಕನಸುಗಳನ್ನು ಪ್ರೋತ್ಸಾಹಿಸುವವಳು ಇವಳು
ನನ್ನವಳು ತನ್ನ ಇಷ್ಟಗಳನ್ನು ಬದೆಗೊತ್ತಿ ತನ್ನ ಸಂಗಾತಿ ಇಷ್ಟಗಳನ್ನು ಗೌರವಿಸುವವಳು ಇವಳು
ನನ್ನವಳು ತನ್ನ ಕುಟುಂಬಕ್ಕೆ ಅತಿಥಿಯಾಗಿ ಪರರ ಕುಟುಂಬಕ್ಕೆ ಸದಸ್ಯಳಾದವಳು ಇವಳು
ನನ್ನವಳು ತನ್ನ ಪೂರ್ತಿ ಜೀವನ ಮತ್ತೊಬ್ಬರ ಇಷ್ಟದಂತೆ ಬದುಕಿದವಳು ಇವಳು
ನನ್ನವಳು ಬಾಲ್ಯದಿಂದ ಕಟ್ಟಿಕೊಂಡ ತನ್ನೆಲ್ಲ ಕನಸುಗಳನ್ನು ಕನಸಿನಲ್ಲಿ ನಶಿಸಿದವಳೇ ಇವಳು
ನನ್ನವಳು ನನ್ನ ಮನೆ ಜನರ ಹಸಿವು ನಿಗಿಸಿ ತನ್ನ ಹಸಿವನ್ನು ಮರೆತವಳು ಇವಳು
ನನ್ನವಳು ಮನೆ ಜನರನ್ನು ಮುಂದೆ ನಿಲ್ಲಿಸಿ ತಾನು ಕೊನೆಯಲ್ಲಿ ನಿಂತವಳು ಇವಳು
ನನ್ನವಳು ತನ್ನ ಭಾವನೆಗಳಿಗೆ ಸ್ಪಂದಿಸದ ವ್ಯಕ್ತಿಗಳ ಭಾವನೆಗಳಿಗೆ ಸ್ಪಂದಿಸುವವಳು ಇವಳು
ನನ್ನವಳು ತನ್ನ ಮನೆ ಜನರು ಹೇಗೆ ವರ್ತಿಸಿದರು ಅವರ ಜೊತೆ ಉತ್ತಮವಾಗಿ ವರ್ತಿಸುವವಳು ಇವಳು
ನನ್ನವಳು ಭೂಲೋಕದಲ್ಲಿ ನೋಡ ಸಿಗುವ ನೈಜ್ಯ ದೇವತೆಯೂ ಇವಳು
ನನ್ನವಳು ಪ್ರಪಂಚದ ಎಲ್ಲಾ ಗೌರವಗಳಿಗೆ ಯೋಗ್ಯವಾದವಳು ಸೂಕ್ತವಾದವಳು ಇವಳು
ನನ್ನವಳು ಯಾವದೇ ಫಲಾಪೇಕ್ಷೆ ಬಯಸದೆ ನಿಸ್ವಾರ್ಥ ಜೀವನ ನಡೆಸುವವಳು ಇವಳು
ನನ್ನವಳು ಹೃದಯಪೂರ್ವಕ ಅಭಿನಂದನೆಗೆ ಅರ್ಹರಾಗುವವಳು ಇವಳು
ನನ್ನವಳು ತನ್ನ ಮನೆಯ ಮಕ್ಕಳಿಗೆ ಶಿಕ್ಷಣ ಕೊಡುವ ಸರಸ್ವತಿಯು ಇವಳು
ನನ್ನವಳು ಮನೆಯಲ್ಲಿ ಸದಾ ಸುಖ ಸಂತೋಷ ಕರುಣಿಸುವ ಲಕ್ಷ್ಮಿಯು ಇವಳು
ನನ್ನವಳು ಮನೆಯ ಎಲ್ಲರಿಗೂ ಅವರಿಷ್ಟದ ಊಟವನ್ನು ಉಣಬಡಿಸುವ ಅನ್ನಪೂರ್ಣೇಯು ಇವಳು
ನನ್ನವಳು ತನ್ನ ಮನೆಯ ಸದಸ್ಯರನ್ನು ದುಷ್ಟರಿಂದ ದುಷ್ಟಶಕ್ತಿಗಳಿಂದ ಕಾಪಾಡುವ ದುರ್ಗೆಯು ಇವಳು
ನನ್ನವಳು ಕ್ಷಮೆ ಕರುಣೆ ಪ್ರೇಮ ಹಾಗೂ ಸ್ನೇಹಕ್ಕೆ ಹೆಸರಾಗಿರುವಳು ಇವಳು
ನನ್ನವಳು ಹರಿಯುವ ನೀರಿನಂತೆ ನಿರ್ಮಲವಾಗಿರುವವಳು ಇವಳು
ನನ್ನವಳು ಈ ಸೃಷ್ಟಿಯಲ್ಲಿ ವಿವಿಧ ರೂಪಗಳಿಂದ ಅಲಂಕೃತಗೊಂಡವಳು ಇವಳು
ನನ್ನವಳು ತನ್ನಲ್ಲಿ ಅಡಗಿರುವ ದುರ್ಗೆಯನ್ನು ಮರೆತು ಕೂತವಳು ಇವಳು
ನನ್ನವಳು ಇಲ್ಲದ ಈ ಸೃಷ್ಟಿಯನ್ನು ಕಲ್ಪಿಸಲು ಕಲ್ಪನೆ ಕೂಡ ಆಗದೆ ಇರುವ ಹಾಗೆ ನಿಸ್ವಾರ್ಥ ಪ್ರೀತಿಯನ್ನು ಕೊಟ್ಟವಳು ಇವಳು.
ನನ್ನವಳು ಇವಳಿಲ್ಲದ ಜಗತ್ತು ಇರದ ಹಾಗೇ ತನ್ನ ಪಾತ್ರಕ್ಕೆ ಜೀವ ತುಂಬಿದವಳು ಇವಳು
ನವೀನ ಹಬೀಬ ಶಿಕ್ಷಕರು
ಜೆ ಎಸ್ ಎಸ್ ಪಬ್ಲಿಕ್ ಸ್ಕೂಲ್ ಹೂವಿನಹಡಗಲಿ