ಮಂಗಳೂರು:- ಮಂಗಳೂರು ಮ್ಯಾಕೊ ಕೋಪರೇಟಿವ್ ಸೊಸೈಟಿ ವತಿಯಿಂದ ರಿಕ್ಷಾ ಚಾಲಕರುಗಳಿಗೆ ವೈದ್ಯಕೀಯ ಇಲಾಖೆಯಿಂದ ನೀಡಲ್ಪಡುವ ಉಚಿತ ಲಸಿಕೆ ಶಿಬಿರವನ್ನು ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಸಂಯೋಗದೊಂದಿಗೆ ಬಲ್ಮಠ ಪೆಟ್ರೋಲ್ ಬಂಕಿನ ಆವರಣದಲ್ಲಿ ಮ್ಯಾಕೋ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ಐವನ್ ಡಿ ಸೋಜರವರ ನೇತೃತ್ವದಲ್ಲಿ ಉದ್ಘಾಟಿಸಿದರು.


‘ಲಸಿಕೆಯನ್ನು ಎಲ್ಲಾ ಕಾರ್ಮಿಕರು ಪಡೆದುಕೊಳ್ಳುವ ಮೂಲಕ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಕಾರ್ಮಿಕರು ಜಾಗ್ರತರಾದರೆ ಇಡೀ ಸಮಾಜ ಜಾಗ್ರತರಾದಂತೆ’ ಎಂದು ಆ ಸಂದರ್ಭದಲ್ಲಿ ಐವನ್ ಡಿಸೋಜರವರು ಕಾರ್ಮಿಕ ವರ್ಗದವರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಮ್ಯಾಕೋ ಕೋಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ  ಶೇಖರ್ ದೇರಳಕಟ್ಟೆ, ಬಬಿತಾ ಡಿ ಸೋಜ, ಸಂಜೀವ ಒಕ್ಕಲಿಗ,  ಗ್ರೆಗೊರಿ ಡಿ ಸೋಜ,  ಅಭಿಬುಲ್ಲ,  ಅಶಿತ್ ಪಿರೇರಾ, ವಿವೇಕ್ ರಾಜ್ ಪೂಜಾರಿ, ಭಾಸ್ಕರ್ ರಾವ್,  ಸವಾದ್ ಗೂನಡ್ಕ,, ಮ್ಯಾಕೋ ಕಾರ್ಯದರ್ಶಿ ದಿನೇಶ್ ಕುಮಾರ್,  ಶಶಿಕಾಂತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.